ಖ್ಯಾತ ಚಲನಚಿತ್ರ ನಟನ ಮದುವೆಗೆ ಕುಟುಂಬದ ಆಯ್ದ 30 ಜನರನ್ನು ಮಾತ್ರ ಆಹ್ವಾನ ನೀಡಲಾಗಿದೆ.
ನಟ ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್ ಅವರು ಆಗಸ್ಟ್ 8 ರಂದು ಮದುವೆಯಾಗಲಿದ್ದಾರೆ.
ಮೇ ತಿಂಗಳಲ್ಲಿ ಒಂದು ಸಣ್ಣ ಸಮಾರಂಭ ಮಾಡಿ, ಅಲ್ಲಿ ಅವರ ಕುಟುಂಬಗಳು ಭೇಟಿಯಾಗಿ ಮದುವೆಯ ದಿನಾಂಕ ನಿರ್ಧರಿಸಿದ್ದರು.
ನಂತರ ನಿಶ್ಚಿತಾರ್ಥದ ಸಮಾರಂಭವನ್ನೂ ಮಾಡಿದರು, ಎಲ್ಲಾ ಸುರಕ್ಷತಾ ಕ್ರಮಗಳ ಜೊತೆಗೆ ಕೇವಲ 30 ಜನರನ್ನು ಮದುವೆಗೆ ಆಹ್ವಾನಿಸಲಾಗಿದೆ.