ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸೀತಾರಾಮ ಧಾರವಾಹಿ ಈಗ ಕೊನೆಯಾಗಿದೆ. ಆದರೆ ಈ ಧಾರವಾಹಿಗೆ ಗಗನ್ ಚಿನ್ನಪ್ಪ ಬದಲು ಬೇರೊಬ್ಬ ಖ್ಯಾತ ನಟ ನಾಯಕನಾಗಬೇಕಿತ್ತು. ಅವರು ಯಾರೆಂದು ನಟಿ ವೈಷ್ಣವಿ ಗೌಡ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಬಿಚ್ಚಿಟ್ಟಿದ್ದಾರೆ.
ಸೀತಾರಾಮ ಧಾರವಾಹಿ ಬಳಿಕ ವೈಷ್ಣವಿ ಗೌಡ ಮನೆಯವರು ನೋಡಿ ನಿಶ್ಚಯಿಸಿದ ಹುಡುಗನೊಂದಿಗೆ ಮದುವೆಯಾಗಿದ್ದಾರೆ. ಈ ಕಾರಣಕ್ಕೆ ಅವರು ಬಣ್ಣದ ಬದುಕಿನಿಂದ ಕೆಲವು ದಿನ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಈಗ ಮತ್ತೆ ಕಮ್ ಬ್ಯಾಕ್ ಮಾಡಲು ತಯಾರಿ ನಡೆಸಿದ್ದಾರೆ.
ಇದರ ನಡುವೆ ಯೂಟ್ಯೂಬ್ ವಾಹಿನಿಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು ಇನ್ನೊಂದು ಅಚ್ಚರಿ ವಿಚಾರವನ್ನೂ ಹೊರಹಾಕಿದ್ದಾರೆ. ವೈಷ್ಣವಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ. ವೆಬ್ ಸೀರೀಸ್ ಒಂದರಲ್ಲಿ ಅಭಿನಯಿಸಲಿದ್ದಾರೆ.
ವಿಶೇಷವೆಂದರೆ ಈ ವೆಬ್ ಸೀರೀಸ್ ನಲ್ಲಿ ಅವರ ಸಹನಟನಾಗಿರುವುದು ಸ್ಕಂದ.ಅಶೋಕ್. ಸಿನಿಮಾ ಜೊತೆಗೆ ಕನ್ನಡ ಕಿರುತೆರೆಯಲ್ಲೂ ಬೇಡಿಕೆಯ ನಟನಾಗಿರುವ ಸ್ಕಂದ ಕೂಡಾ ವೈಷ್ಣವಿ ಜೊತೆಗೆ ಈ ವೇಳೆ ಮಾತನಾಡಿದ್ದು ನಾವಿಬ್ಬರೂ ಸೀತಾರಾಮ ಧಾರವಾಹಿಯಲ್ಲೇ ಒಟ್ಟಿಗೇ ಕೆಲಸ ಮಾಡಬೇಕಿತ್ತು ಎಂಬ ಅಚ್ಚರಿ ವಿಚಾರವನ್ನು ಹೊರಹಾಕಿದ್ದಾರೆ. ಸೀತಾರಾಮ ಧಾರವಾಹಿಯಲ್ಲಿ ರಾಮ್ ಪಾತ್ರವನ್ನು ಸ್ಕಂದ ಮಾಡಬೇಕಿತ್ತು ಎಂದು ವೈಷ್ಣವಿ ಹೇಳಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಸ್ಕಂದ ಹೌದು, ನನಗೂ ಆ ಪಾತ್ರ ತುಂಬಾ ಇಷ್ಟವಾಗಿತ್ತು. ಆದರೆ ಅಷ್ಟರಲ್ಲಿ ನಾನು ಕಾಲು ಫ್ರ್ಯಾಕ್ಚರ್ ಮಾಡಿಕೊಂಡಿದ್ದೆ. ಹೀಗಾಗಿ ತಪ್ಪಿ ಹೋಯಿತು. ಈಗ ವೆಬ್ ಸೀರೀಸ್ ಮೂಲಕ ವೈಷ್ಣವಿ ಜೊತೆ ನಟಿಸುತ್ತಿರುವುದಕ್ಕೆ ಖುಷಿಯಿದೆ ಎಂದಿದ್ದಾರೆ.