Select Your Language

Notifications

webdunia
webdunia
webdunia
webdunia

117 ಅಡಿ ಎತ್ತರದಿಂದ ಜಿಗಿದ ವೈಷ್ಣವಿ ಗೌಡ, ಇದೆಲ್ಲ ಗಂಡನಿಂದ ಸಾಧ್ಯ ಎಂದ ನಟಿ

ನಟಿ ವೈಷ್ಣವಿ ಗೌಡ ಗಂಡ

Sampriya

ಬೆಂಗಳೂರು , ಶನಿವಾರ, 21 ಜೂನ್ 2025 (17:17 IST)
Photo Credit X
ಬೆಂಗಳೂರು: ಅಗ್ನಿಸಾಕ್ಷಿ, ಸೀತಾರಾಮ ಕಲ್ಯಾಣ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಈಚೆಗೆ  ಏರ್‌ಫೋರ್ಸ್‌ ಆಫೀಸರ್‌ ಅನುಕೂಲ್ ಮಿಶ್ರಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಸದ್ಯ ಕಿರುತೆರೆಯಿಂದ ಬ್ರೇಕ್ ಪಡೆದುಕೊಂಡಿರುವ ವೈಷ್ಣವಿ ಅವರು ಪತಿ ಜತೆ ಸಮಯವನ್ನು ಕಳೆಯುತ್ತಿದ್ದಾರೆ. 

ಇದೀಗ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪತಿ ಅನುಕೂಲ್ ಮಿಶ್ರಾ ಜತೆ ಬಂಗೀ ಜಂಪಿಂಗ್ ಮಾಡಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. 

117ಫೀಟ್‌ ಎತ್ತರದಿಂದ ಬಂಗೀ ಜಂಪಿಗ್ ಮಾಡಿದ್ದು, ನನ್ನ ಗಂಡನಿಂದಾಗಿ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. 

ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ನಟಿ ವೈಷ್ಣವಿ ಗೌಡ - ಅನುಕೂಲ್ ಮಿಶ್ರಾ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ನಟಿ ಅಮೂಲ್ಯ, ನಿವೇದಿತಾ ಗೌಡ, ವಿಜಯ್ ಸೂರ್ಯ, ಐಶ್ವರ್ಯಾ ಸಾಲಿಮಠ ಸೇರಿದಂತೆ ಕಿರುತೆರೆಯ ತಾರೆಯರು ಆಗಮಿಸಿ ಹೊಸ ಜೀವನಕ್ಕೆ ನಾಂದಿ ಹಾಡಿದ ವೈಷ್ಣವಿ ಗೌಡ - ಅನುಕೂಲ್ ಮಿಶ್ರಾಗೆ ಶುಭ ಹಾರೈಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಬ್ರಾಂಡ್ ಅಂಬಾಸಿಡರ್‌ ಆಗಿ ಕಂಗನಾ ರನೌತ್