Publish Date: Sat, 07 Jun 2025 (08:45 IST)
Updated Date: Sat, 07 Jun 2025 (08:50 IST)
ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಮನೆಯವರೇ ನೋಡಿ ನಿಶ್ಚಯಿಸಿದ ಅನುಕೂಲ್ ಮಿಶ್ರಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ವೈಷ್ಣವಿ ಗೌಡ ಎಲ್ಲಾ ಬಿಟ್ಟು ಉತ್ತರ ಭಾರತ ಶೈಲಿಯಲ್ಲಿ ಮದುವೆಯಾಗಿದ್ದೇಕೆ?
ಇತ್ತೀಚೆಗಷ್ಟೇ ಸೀತಾರಾಮ ಧಾರವಾಹಿ ಮುಕ್ತಾಯವಾಗಿತ್ತು. ಇದರ ಬೆನ್ನಲ್ಲೇ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ತಮ್ಮ ಮದುವೆಯ ಸಿಹಿ ಸುದ್ದಿ ನೀಡಿದ್ದರು. ಅನುಕೂಲ್ ಜೊತೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈಷ್ಣವಿ ಗೌಡ ಚಪ್ಪರ ಶಾಸ್ತ್ರ, ಹಳದಿ ಶಾಸ್ತ್ರ ಬಳಿಕ ಸಂಗೀತ್ ಕಾರ್ಯಕ್ರಮವಿಟ್ಟುಕೊಂಡಿದ್ದರು. ಆರ್ ಸಿಬಿ ಫೈನಲ್ ಪಂದ್ಯದ ನಡುವೆಯೇ ಅವರ ಸಂಗೀತ್ ಕಾರ್ಯಕ್ರಮವೂ ನಡೆದು ಹೋಗಿತ್ತು. ಸಂಗೀತ್ ಕಾರ್ಯಕ್ರಮಕ್ಕೆ ಕನ್ನಡ ಕಿರುತೆರೆಯ ಅನೇಕ ನಟ-ನಟಿಯರು ಬಂದು ಹಾರೈಸಿದ್ದರು.
ಇದಾದ ಬಳಿಕ ವೈಷ್ಣವಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ. ಅನುಕೂಲ್ ಜೊತೆ ಉತ್ತರ ಭಾರತ ಶೈಲಿ ಮತ್ತು ಗೌಡ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಅಷ್ಟಕ್ಕೂ ಅವರು ಉತ್ತರ ಭಾರತ ಶೈಲಿಯಲ್ಲಿ ಮದುವೆಯಾಗಲು ಕಾರಣವಿದೆ. ಅವರ ಪತಿ ಅನುಕೂಲ್ ಉತ್ತರ ಭಾರತೀಯರು. ಏರ್ ಫೋರ್ಸ್ ಉದ್ಯೋಗಿಯಾಗಿರುವ ಅನುಕೂಲ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಉತ್ತರ ಭಾರತೀಯರಾಗಿರುವ ಕಾರಣಕ್ಕೆ ಆ ಶೈಲಿಯಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ. ಜೊತೆಗೆ ವೈಷ್ಣವಿ ಗೌಡ ತಮ್ಮ ಸಂಪ್ರದಾಯಂತೆ ಗೌಡ ಶೈಲಿಯಲ್ಲೂ ಕೆಲವು ಶಾಸ್ತ್ರಗಳನ್ನು ಮಾಡಿಸಿಕೊಂಡಿದ್ದಾರೆ.