ಲಾಸ್ ಏಂಜಲೀಸ್: ಖ್ಯಾತ ಗಾಯಕಿ, ಗೀತರಚನೆಗಾರ್ತಿ ರಿಹಾನಾ ಅವರು ಮೂರನೇ ಭಾರೀ ತಾಯಿಯಾಗಿದ್ದಾರೆ. ಗಾಯಕಿ ಈಗ ತನ್ನ 3 ನೇ ಮಗುವಿಗೆ ಜನ್ಮನೀಡಿದ್ದು, ಮಗುವಿನ ಜತೆಗಿನ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ.
ತನ್ನ ಮೂರನೇ ಮಗುವನ್ನು ರಾಪರ್ A$AP ರಾಕಿಯೊಂದಿಗೆ ಸ್ವಾಗತಿಸಿದರು.
ತನ್ನ ಪುಟ್ಟ ಮಗುವಿನ ಮೊದಲ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ ಅವರು ಇನ್ಸ್ಟಾಗ್ರಾಮ್ನಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ.
ಮಗು ಸೆಪ್ಟೆಂಬರ್ 13, 2025 ರಂದು ಜನಿಸಿತು. ಆದರೆ ಮಗುವಿನ ಜನನದ ಸುದ್ದಿಯನ್ನು ರಿಹಾನ್ನಾ ಅವರು ಗುರುವಾರ ತಮ್ಮ Instagram ನಲ್ಲಿ ಹಂಚಿಕೊಂಡಿದ್ದಾರೆ.
2020 ರಿಂದ ಒಟ್ಟಿಗೆ ಇರುವ ದಂಪತಿಗಳು ಇದೀಗ ಮೂರನೇ ಮಗುವನ್ನು ಸ್ವಾಗತಿಸಿದ್ದಾರೆ.
ಮೊದಲೇ ಇಬ್ಬರು ಗಂಡು ಮಕ್ಕಳನ್ನ ಪಡೆದುಕೊಂಡಿರುವ ರಿಹಾನಾ ಈಗ ಹೆಣ್ಣು ಹುಟ್ಟಿದ್ದಕ್ಕೆ ಭಾರೀ ಖುಷಿಯಿಂದ ಸುದ್ದಿ ಹಂಚಿಕೊಂಡಿರುವ ರಿಹಾನಾ ಈಗ ಫ್ಯಾಮಿಲಿ ಕಂಪ್ಲೀಟ್ ಆಗಿದೆ ಎಂದಿದ್ದಾರೆ. 37 ವರ್ಷದ ಗಾಯಕಿ ರಿಹಾನಾ ಜಗತ್ತಿನಲ್ಲೇ ಅತ್ಯಂತ ಪ್ರಸಿದ್ಧ ಸಂಗೀತಗಾರ್ತಿ ಎಂದು ಹೆಸರು ಪಡೆದುಕೊಂಡಿದ್ದಾರೆ.
ಇನ್ನೂ ರಿಯನಾ ಅವರು ಮುಕೇಶ್ ಹಾಗೂ ನೀತಾ ಅಂಬಾನಿ ಅವರ ಮಗ ಅನಂತ್ ಅಂಬಾನಿ ಅವರ ಪ್ರೀ ವೆಡ್ಡಿಂಗ್ ಸೆಲೆಬ್ರೇಶನ್‌ನಲ್ಲಿ ಹಾಡು ಹಾಡಿ, ಭಾರೀ ಸದ್ದು ಮಾಡಿದ್ದರು.