ಬೆಂಗಳೂರು: ಆಗಸ್ಟ್ ನಲ್ಲಾದರೂ ಹೊಸ ಸಿನಿಮಾಗಳು ಘೋಷಣೆಯಾಗಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಚಿತ್ರಮಂದಿರಕ್ಕೆ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶ ಸಿಗದೇ ಚಿತ್ರರಂಗ ಹೊಸ ಸಿನಿಮಾಗಳ ಘೋಷಣೆ ಮಾಡಲು ಆಸಕ್ತಿಯೇ ತೋರುತ್ತಿಲ್ಲ.
ಕೇವಲ ಸ್ಟಾರ್ ಸಿನಿಮಾಗಳು ಮಾತ್ರವಲ್ಲ, ಹೊಸಬರ ಚಿತ್ರಗಳೂ ಬಿಡುಗಡೆಯಾಗುತ್ತಿಲ್ಲ. ಮೊನ್ನೆಯಷ್ಟೇ ಜೀವ್ನಾನೇ ನಾಟ್ಕ ಸಾಮಿ ಚಿತ್ರ ಬಿಡುಗಡೆಯಾಗಿತ್ತು. ಈ ಹೊಸಬರ ಸಿನಿಮಾವೂ ಸಿಂಗಲ್ ಸ್ಕ್ರೀನ್ ನಲ್ಲಿ ಬಿಡುಗಡೆಯಾಗಿರಲಿಲ್ಲ. ಮೊನ್ನೆ ಅಜೇಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಮರುಬಿಡುಗಡೆಯಾಗಿದೆ.
ಅದು ಬಿಟ್ಟರೆ ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರೊಂದಿಗೆ ಹಳೆಯ ಸಿನಿಮಾಗಳೇ ಓಡಾಡುತ್ತಿವೆ. 100 ಪ್ರೇಕ್ಷಕರಿಗೆ ಅವಕಾಶ ಕೊಡದೇ ಹೊಸಬರೂ ಚಿತ್ರ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯಕ್ಕೆ ಚಿತ್ರರಂಗ ಕೇವಲ ಟ್ರೈಲರ್, ಟೀಸರ್, ಹಾಡುಗಳ ಬಿಡುಗಡೆಯಲ್ಲೇ ಕಾಲ ಕಳೆಯುತ್ತಿದೆ.