Publish Date: Wed, 20 Jul 2022 (09:50 IST)
Updated Date: Wed, 20 Jul 2022 (09:57 IST)
ಕೊಚ್ಚಿ: ಬಹುಭಾಷಾ ನಟಿ ನಿತ್ಯಾ ಮೆನನ್ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.
ನಿತ್ಯಾ ಸದ್ಯದಲ್ಲೇ ಮಲಯಾಳಂನ ಜನಪ್ರಿಯ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಸ್ನೇಹಿತರೊಬ್ಬರ ಮೂಲಕ ನಿತ್ಯಾಗೆ ಈ ನಟನ ಪರಿಚಯವಾಗಿದೆ. ಇದಾದ ಬಳಿಕ ಇಬ್ಬರೂ ಆಪ್ತರಾಗಿದ್ದಾರೆ.
ಇನ್ನೇನು ಸದ್ಯದಲ್ಲೇ ಇಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದಾರೆ. ಈಗ ಅಧಿಕೃತ ಘೋಷಣೆ ಮಾಡುವುದೊಂದೇ ಬಾಕಿ ಎನ್ನಲಾಗಿದೆ. ಮಲಯಾಳಂ, ಕನ್ನಡ, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ನಟಿಸುವ ನಿತ್ಯಾ ಸದ್ಯಕ್ಕೆ ಮದುವೆಯಾಗಿಯೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ ಎನ್ನಲಾಗುತ್ತಿದೆ.