Publish Date: Thu, 16 Apr 2020 (10:05 IST)
Updated Date: Thu, 16 Apr 2020 (10:07 IST)
ಬೆಂಗಳೂರು: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಮದುವೆ ಸಮಾರಂಭ ನಾಳೆ ನಿಗದಿತ ಮುಹೂರ್ತಕ್ಕೇ ನೆರವೇರಲಿದೆ.
ಆದರೆ ಕೊರೋನಾದಿಂದಾಗಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಅದ್ಧೂರಿಯಾಗಿ ಮದುವೆ ನಡೆಸಲು ಸಾಧ‍್ಯವಿಲ್ಲ. ಹೀಗಾಗಿ ನಿಖಿಲ್ ಮದುವೆ ಕೇವಲ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗಿದೆ.
ಸದ್ಯಕ್ಕೆ ಮದುವೆ ಶಾಸ್ತ್ರ ಮುಗಿಸಿ ಪರಿಸ್ಥಿತಿ ತಿಳಿಯಾದ ನಂತರ ರಾಮನಗರದಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಮಾಡುವ ಯೋಜನೆಯೂ ಎಚ್ ಡಿ ಕೆ ಕುಟುಂಬಕ್ಕಿದೆ ಎನ್ನಲಾಗಿದೆ.