ಚೆನ್ನೈ: ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಇವರ ಮದುವೆ ದಿನಾಂಕ ಫಿಕ್ಸ್ ಆಗಿದ್ದು, ಸ್ಥಳವೂ ನಿಗದಿಯಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈ ಜೋಡಿ ಜೂನ್ 9 ರಂದು ಮಹಾಬಲಿಪುರಂನಲ್ಲಿ ಮದುವೆಯಾಗಲಿದ್ದಾರೆ. ಈಗಾಗಲೇ ಆಪ್ತರಿಗೆ ಆಹ್ವಾನ ನೀಡಲಾಗುತ್ತಿದೆಯಂತೆ.
ಆರು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ. ಇತ್ತೀಚೆಗೆ ವಿಘ್ನೇಶ್ ಕುಟುಂಬ ದೇವರ ದೇವಾಲಯಕ್ಕೆ ತೆರಳಿ ಇಬ್ಬರೂ ಪೂಜೆ ಸಲ್ಲಿಸಿದ್ದರು. ಆಗಲೇ ಇಬ್ಬರೂ ಸದ್ಯದಲ್ಲೇ ಮದುವೆಯಾಗುವುದು ಪಕ್ಕಾ ಎನ್ನಲಾಗಿತ್ತು.