Select Your Language

Notifications

webdunia
webdunia
webdunia
webdunia

Nayana Raj: ಸೂರ್ಯವಂಶದ ಅನಿರುದ್ಧ್ ಗೆ ನಾಯಕಿಯಾಗುತ್ತಿರುವ ನಯನಾ ರಾಜ್ ಜೊತೆ ಮಾತುಕತೆ

Nayana Raj

Krishnaveni K

ಬೆಂಗಳೂರು , ಸೋಮವಾರ, 5 ಫೆಬ್ರವರಿ 2024 (13:31 IST)
ಬೆಂಗಳೂರು: ಸೂರ್ಯವಂಶ ಟೈಟಲ್ ಗೂ ಸಾಹಸಸಿಂಹ ಡಾ.ವಿಷ್ಣುವರ್ಧನ್ ಗೂ ಇರುವ ನಂಟು ಯಾರಿಗೆ ಗೊತ್ತಿಲ್ಲ ಹೇಳಿ? ಇದೀಗ ಅದೇ ಟೈಟಲ್ ಇಟ್ಟುಕೊಂಡು ಅವರ ಅಳಿಯ, ನಟ ಅನಿರುದ್ಧ್ ಜತ್ಕಾರ್ ನಾಯಕರಾಗಿ ಧಾರವಾಹಿಯೊಂದು ಬರುತ್ತಿದೆ.

ಕಳೆದ ವರ್ಷ ಎಸ್.ನಾರಾಯಣ್ ನೇತೃತ್ವದಲ್ಲಿ ಸೂರ್ಯವಂಶ ಧಾರವಾಹಿ ಸೆಟ್ಟೇರಿತ್ತು. ಆದರೆ ಕಾರಣಾಂತರಗಳಿಂದ ಅದು ನಿಂತು ಹೋಯ್ತು. ಇದೀಗ ಹೊಸ ತಂಡದೊಂದಿಗೆ ಉದಯ ವಾಹಿನಿ ಸೂರ್ಯವಂಶ ಧಾರವಾಹಿ ಪ್ರಸಾರಕ್ಕೆ ಸಿದ್ಧತೆ ನಡೆಸಿದೆ. ಈ ಬಗ್ಗೆ ವಾಹಿನಿ ಈಗಾಗಲೇ ಪ್ರೋಮೋ ಹೊರಬಿಟ್ಟಿದೆ. ಇದನ್ನು ನೋಡಿದರೆ ಯಾವ ಸಿನಿಮಾಗೂ ಕಮ್ಮಿಯಿಲ್ಲ ಎನ್ನುವ ರೀತಿಯಿದೆ. ನಟ ಅನಿರುದ್ಧ್ ಸೂರ್ಯವಂಶದ ಸತ್ಯಮೂರ್ತಿ ವಂಶದ ಕುಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಧಾರವಾಹಿಯಲ್ಲಿ ಇಬ್ಬರು ನಾಯಕಿಯರಿದ್ದಾರೆ. ಆ ಪೈಕಿ ನಯನಾ ರಾಜ್ ಕೂಡಾ ಒಬ್ಬರು. ಅವರ ಜೊತೆಗೆ ವೆಬ್ ದುನಿಯಾ ನಡೆಸಿದ ಚಿಟ್ ಚ್ಯಾಟ್ ನ ಸಾರಾಂಶ ಇಲ್ಲಿದೆ.

ಸೂರ್ಯವಂಶದ ಕುಡಿಗೆ ನಾಯಕಿಯಾಗುತ್ತಿರುವ ಖುಷಿಯಲ್ಲಿ ನಯನಾ ರಾಜ್
ಇದುವರೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಕಿರುತೆರೆಯಲ್ಲಿ ಪಾತ್ರ ಮಾಡಿದ್ದರು. ಸ್ಯಾಂಡಲ್ ವುಡ್ ಸಿನಿಮಾದಲ್ಲಿ ನಟಿಸಿದ್ದರೂ ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಪ್ರೊಡಕ್ಷನ್ ಹೌಸ್‍ ಕಡೆಯಿಂದ ನನಗೆ ಕಾಲ್ ಬಂದಿತ್ತು. ಈ ಪಾತ್ರಕ್ಕೆ ನಾನು ಆಯ್ಕೆಯಾದಾಗ ಅನಿರುದ್ಧ್ ಸರ್ ಜೊತೆ ನಟಿಸುತ್ತಿದ್ದೇನೆ ಎನ್ನುವ ಖುಷಿ ನನ್ನದಾಗಿತ್ತು. ಅವರನ್ನು ನಾನು ಇದೇ ಮೊದಲ ಬಾರಿ ಮೀಟ್ ಮಾಡ್ತಿರೋದು. ಅವರು ನಿಜವಾಗಿಯೂ ಸೂರ್ಯವಂಶದವರೇ. ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಭಿಮಾನಿ ನಾನು. ಈ ಧಾರವಾಹಿ ವಿಷ್ಣು ಸರ್ ಆಶೀರ್ವಾದದಿಂದಲೇ ನಿರ್ಮಾಣವಾಗ್ತಿದೆ ಎನ್ನಬಹುದು. ಈ ಧಾರವಾಹಿಯಲ್ಲಿ ಪಾತ್ರ ಮಾಡುತ್ತಿರುವುದಕ್ಕೆ ನಾನು ಲಕ್ಕಿ. ಅನಿರುದ್ಧ್ ಸರ್ ಜೊತೆ ನಟಿಸುವುದು ತುಂಬಾ ಖುಷಿಕೊಟ್ಟಿದೆ. ಅವರನ್ನು ಮೊದಲ ಬಾರಿಗೆ ಪ್ರೋಮೋ ಶೂಟ್ ನಲ್ಲೇ ಭೇಟಿಯಾಗಿದ್ದೆ. ಅವರು ತುಂಬಾ ಚೆನ್ನಾಗಿ ಮಾತನಾಡಿಸಿದರು. ಅವರು ಮಾತನಾಡುವ ರೀತಿ, ಸಹಕಲಾವಿದರಿಗೆ ಕೊಡುವ ಗೌರವ ನೋಡಿದರೆ ನಿಜಕ್ಕೂ ಅವರು ಸೂರ್ಯವಂಶದವರೇ’ ಎಂದಿದ್ದಾರೆ ನಯನಾ.

webdunia
ಸೂರ್ಯವಂಶ ಪಾತ್ರದ ಬಗ್ಗೆ
‘ಈ ಧಾರವಾಹಿಯ ಪ್ರೋಮೋ ಒಂದು ಫಿಲಂ ರೇಂಜ್ ಗಿತ್ತು. ಅದೇ ರೀತಿ ಶೂಟ್ ಮಾಡ್ತಿದ್ದಾರೆ ಕೂಡಾ. ನಾನು ಇದುವರೆಗೆ ಪ್ರೋಮೋ ಶೂಟಿಂಗ್ ನಲ್ಲಿ ಮಾತ್ರ ಭಾಗಿಯಾಗಿದ್ದೇನೆ. ಇದೇ ತಿಂಗಳು ನನ್ನ ಪಾತ್ರದ ಶೂಟಿಂಗ್ ಆರಂಭವಾಗಲಿದೆ.  ಸ್ವಲ್ಪ ದಿನದಲ್ಲೇ ಧಾರವಾಹಿ ಆರಂಭವಾಗುವ ಸಾಧ‍್ಯತೆಯಿದೆ. ಈ ಧಾರವಾಹಿಯಲ್ಲಿ ಇಬ್ಬರು ನಾಯಕಿಯರಿರುತ್ತಾರೆ. ಇಬ್ಬರಿಗೂ ಸಮಾನ ಅವಕಾಶವಿದೆ. ನನ್ನದು ನೋಡುವಾಗ ಮಧ್ಯಮ ವರ್ಗದ ಸಾಮಾನ್ಯ ಹುಡುಗಿಯ ಪಾತ್ರವಾದರೂ ಅಲ್ಲೊಂದು ಟ್ವಿಸ್ಟ್ ಇದೆ. ಅದನ್ನು ನೀವು ನೋಡಿಯೇ ತಿಳಿಯಬೇಕು.

ಸೂರ್ಯವಂಶ ಧಾರವಾಹಿಯಲ್ಲಿ ದೊಡ್ಡ ದೊಡ್ಡ ಕಲಾವಿದರ ಬಳಗವೇ ಇರಲಿದೆ. ಅನಿರುದ್ಧ್ ನಾಯಕರಾದರೆ, ಇನ್ನೊಬ್ಬ ನಾಯಕಿಯಾಗಿ ಮುದ್ದುಮಣಿಗಳು ಅಶ್ವಿನಿ, ನೀನಾಸಂ ಅಶ್ವತ್ಥ್, ಹಿರಿಯ ನಟ ಸುಂದರ್ ರಾಜ್ ಅವರಂತಹ ಮೇರು ಕಲಾವಿದರು ಅಭಿನಯಿಸಲಿದ್ದಾರೆ’.

ಸೂರ್ಯವಂಶ ಸಿನಿಮಾಗೂ ಇದಕ್ಕೂ ಸಂಬಂಧವಿದೆಯಾ?
‘ಸೂರ್ಯವಂಶ ಸಿನಿಮಾಗೂ ಇದಕ್ಕೂ ಸಂಬಂಧವಿಲ್ಲ. ಸಿನಿಮಾದಲ್ಲಿರುವ ಸೂರ್ಯವಂಶ ಸತ್ಯಮೂರ್ತಿ ಮುಂದಿನ ಜನಾಂಗದ ಕತೆಯಿರುತ್ತದೆ. ಸದ್ಯಕ್ಕೆ ನಾವು ಕತೆ ಬಗ್ಗೆ ಏನೂ ರಿವೀಲ್ ಮಾಡುವ ಹಾಗಿಲ್ಲ. ನನ್ನ ಪಾತ್ರವಂತೂ ತುಂಬಾ ಚೆನ್ನಾಗಿದೆ. ಮೊದಲು ಅಮಾಯಕಿಯಾಗಿ ಕಾಣಿಸ್ತೀನಿ. ಆದರೆ ಮುಂದೆ ಹೋದ ಹಾಗೆ ನಾನು ನಿಜವಾಗಿ ಯಾರು ಎಂದು ರಿವೀಲ್ ಆಗುತ್ತೆ. ಸದ್ಯಕ್ಕೆ ಪ್ರಮೋಷನ್ ಮಾಡ್ತಿದ್ದಾರೆ. ಮುಂದಿನ ತಿಂಗಳು ಟೆಲಿಕಾಸ್ಟ್ ಆಗಬಹುದು ಎಂದು ನಿರೀಕ್ಷೆಯಿದೆ. ಪ್ರಮೋಷನ್ ಆದ ಮೇಲೆ ಟೆಲಿಕಾಸ್ಟ್ ದಿನಾಂಕ ಬಹಿರಂಗವಾಗಲಿದೆ’ ಎಂದಿದ್ದಾರೆ ನಯನಾ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಗಾಸ್ಟಾರ್ ಚಿರಂಜೀವಿ ಭೇಟಿಯಾಗಿ ಒಟ್ಟಿಗೇ ಊಟ ಸವಿದ ಶಿವರಾಜ್ ಕುಮಾರ್