ಬೆಂಗಳೂರು: ಟಾಲಿವುಡ್ ಜೋಡಿ ನರೇಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಪವಿತ್ರಾ ಲೋಕೇಶ್ ನೀಡಿದ ಹೇಳಿಕೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗಿದೆ.
ನರೇಶ್ ನಿನ್ನೆ 65 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ಅವರು ಮಾಧ್ಯಮಗೋಷ್ಠಿಯಲ್ಲಿ ಪತ್ನಿ ಪವಿತ್ರಾ ಜೊತೆ ಬಂದು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಗೂ ಪವಿತ್ರಾ ಉಡುಗೊರೆಯಾಗಿ ನೀಡಿದ್ದ ಟಿ ಶರ್ಟ್ ನ್ನೇ ನರೇಶ್ ಧರಿಸಿದ್ದರೆ, ನರೇಶ್ ಉಡುಗೊರೆಯಾಗಿ ನೀಡಿದ್ದ ಸೀರೆಯನ್ನೇ ಪವಿತ್ರಾ ಉಟ್ಟುಕೊಂಡು ಬಂದಿದ್ದರು. ಈ ವೇಳೆ ನರೇಶ್ ಎನರ್ಜಿ ಬಗ್ಗೆ ಪವಿತ್ರಾ ಮಾತನಾಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೆಲಸದ ವಿಚಾರ ಬಂದರೆ ನರೇಶ್ ಗೆ 10 ಜನರಿಗಿರುವ ಎನರ್ಜಿ ಇದೆ. ನಾವು ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ದಿನ ರಾತ್ರಿ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ರಾತ್ರಿ ನನಗೆ ಸುಸ್ತಾಗುತ್ತದೆ. ಆದರೆ ಇನ್ನುಳಿದ ಕೆಲಸವನ್ನು ನೀವೇ ಮಾಡಿ ಎಂದರೂ ಅವರಿಗೆ ಸುಸ್ತಾಗುವುದಿಲ್ಲ. ಕೆಲಸದ ವಿಚಾರದಲ್ಲಿ ನರೇಶ್ ನಷ್ಟು ಚೈತನ್ಯ ನಮ್ಮಲ್ಲಿಲ್ಲ ಎಂದು ಪವಿತ್ರಾ ಹೇಳಿದ್ದಾರೆ.
ಪವಿತ್ರಾ ಕೆಲಸದ ವಿಚಾರವಾಗಿ ಈ ಹೇಳಿಕೆ ನೀಡಿದ್ದರೂ ನೆಟ್ಟಿಗರು ಇದೇ ವಿಡಿಯೋವನ್ನಿಟ್ಟುಕೊಂಡು ನಾನಾ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.