Select Your Language

Notifications

webdunia
webdunia
webdunia
webdunia

ಸೃಜನ್ ಜತೆ ಮಾತು ಬಿಟ್ಟಿದ್ದೀರಾ: ಮಜಾ ಟಾಕೀಸ್‌ನಲ್ಲಿ ಕಾಣಿಸಿಕೊಳ್ಳದ ಶ್ವೇತಾ ಚೆಂಗಪ್ಪಗೆ ಹಲವು ಪ್ರಶ್ನೆ

Swetha Changappa, Actor Srujan Lokesh, Maaja Talkies,

Sampriya

ಬೆಂಗಳೂರು , ಸೋಮವಾರ, 20 ಜನವರಿ 2025 (14:46 IST)
Photo Courtesy X
ಬಿಗ್‌ಬಾಸ್ ಸೀಸನ್ 11 ಮುಗಿಯುತ್ತಿದ್ದ ಹಾಗೇ ಕಲರ್ಸ್ ಕನ್ನಡದಲ್ಲಿ ಶನಿವಾರ ಹಾಗೂ ಭಾನುವಾರ ರಾತ್ರಿ ಮಜಾ ಟಾಕೀಸ್‌ ಶುರುವಾಗಲಿದೆ. ಈಗಾಗಲೇ ಕಲರ್ಸ್‌ ಕನ್ನಡ ವಾಹಿನಿ ಪ್ರೋಮೋವನ್ನು ಬಿಟ್ಟಿದ್ದು, ಹೊಸ ಕಲಾವಿದರ ಜತೆಗೆ ಸೃಜನ್ ಲೋಕೇಶ್ ನಗು ಹಂಚಲು ಬರುತ್ತಿದ್ದಾರೆ.

ಆದರೆ ಮಜಾ ಟಾಕೀಸ್‌ನಿಂದ ಹೆಚ್ಚು ಗುರುತಿಸಿಕೊಂಡಿದ್ದ ಶ್ವೇತಾ ಚೆಂಗಪ್ಪ, ಮಂಡ್ಯ ರಮೇಶ್‌, ಇಂದ್ರಜಿತ್ ಲಂಕೇಶ್ ಅವರು ಈ ಭಾರಿ ಕಾಣಿಸಿಕೊಳ್ಳುತ್ತಿಲ್ಲ. ಮಜಾ ಟಾಕೀಸ್‌ನಲ್ಲಿ ರಾಣಿ ಎಂದೇ ಖ್ಯಾತಿ ಗಳಿಸಿರುವ ಶ್ವೇತಾ ಚೆಂಗಪ್ಪ ಇದೀಗ ಸೃಜನ್ ಲೋಕೇಶ್ ತಂಡದಿಂದ ಹೊರಬಂದ್ರ ಎಂಬ ಪ್ರಶ್ನೆ ಶುರುವಾಗಿದೆ.

ಈ ಹಿಂದೆ ಮಜಾ ಟಾಕೀಸ್‌ನಲ್ಲಿ ಸೃಜನ್ ಪತ್ನಿಯಾಗಿ ಶ್ವೇತಾ ಚೆಂಗಪ್ಪ ಅವರು ರಾಣಿ ಪಾತ್ರಕ್ಕೆ ಜೀವತುಂಬಿದ್ದರು. ಇದೀಗ ಹೊಸದಾಗಿ ಪ್ರಸಾರವಾಗುವ ಮಜಾ ಟಾಕೀಸ್‌ನಲ್ಲಿ ಶ್ವೇತಾ ಚೆಂಗಪ್ಪ ಇಲ್ಲದಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ತಂದಿದೆ.

ಅವರು ಈಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡ ಪೋಸ್ಟ್‌ಗೆ ಅನೇಕರು ನೀವ್ಯಾಕೆ ಈ ಬಾರಿಯ ಮಜಾ ಟಾಕೀಸ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಒಬ್ಬರು, ಸೃಜನ್ ನೀವು ಮಾತನಾಡುತ್ತಿಲ್ಲವೇ ಎಂದು ಕೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Kiccha Sudeep: ಕೊನೆಯ ಪಂಚಾಯ್ತಿ ನಡೆಸಿ ಭಾವುಕರಾದ ಕಿಚ್ಚ ಸುದೀಪ್