ಈಚೆಗೆ ಬ್ರೇಕಪ್ ವಿಚಾರವಾಗಿ ಸುದ್ದಿಯಲ್ಲಿದ್ದ ಬಿಗ್‌ಬಾಸ್ ಸ್ಪರ್ಧಿ ಜಯಶ್ರೀ ಆರಾಧ್ಯ ಅವರು ಇದೀಗ ಹೈದರಾಬಾದ್‌ನಲ್ಲಿ ತಮ್ಮ ಗ್ಲಾಮ್ ರೂಂ ಬ್ರ್ಯಾಂಡ್ ಸಲೂನ್ ಆರಂಭಿಸಿದ್ದಾರೆ.
ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿದ್ದ ಗ್ಲಾಮ್ ರೂಂ ಅನ್ನು ಹೈದರಬಾದ್‌ಗೂ ವಿಸ್ತರಿಸಿದ್ದಾರೆ.
ಕನ್ನಡದ ಹಿರಿಯ ಖಳನಟಿ ಮಾರಿಮುತ್ತು ಮೊಮ್ಮಗಳಾಗಿರುವ ಜಯಶ್ರೀ ಅವರು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದರು. ಅದಲ್ಲದೆ ಹಲವು ವರ್ಷಗಳ ಗೆಳೆಯ ಸ್ಟೀವನ್ ಜತೆಗಿನ ಪ್ರೀತಿಯಿಂದ ಸಾಮಾಜಿಕ ಜಾಲತಾಣದಲ್ಲೂ ಗುರುತಿಸಿಕೊಂಡಿದ್ದರು. ಇದರಿಂದ ಈ ಜೋಡಿ ಕಲರ್ಸ್ ಕನ್ನಡದ ರಾಜಾ ರಾಣಿ ಶೋನಲ್ಲಿ ಭಾಗವಹಿಸಿದ್ದರು.
ಈ ಶೋ ಬಲಿಕ ಈ ಜೋಡಿ ಮಧ್ಯೆ ಬಿರುಕು ಮೂಡಿ ಇದೀಗ ದೂರ ದೂರವಾಗಿದ್ದಾರೆ. ಸಾಮಾಜಿಕ ಜಾಲತಾನದಲ್ಲಿ ಆಕ್ಟೀವ್ ಆಗಿರುವ ಜಯಶ್ರೀ ಇದೀಗ ತಮ್ಮ ಗ್ಲಾಮ್ ರೂಂ ಅನ್ನು ಹೈದರಬಾದ್‌ಗೂ ವಿಸ್ತರಿಸಿರುವ ಬಗ್ಗೆ ಹಂಚಿಕೊಂಡಿದ್ದಾರೆ.