Select Your Language

Notifications

webdunia
webdunia
webdunia
webdunia

ಈ ಕಾರಣಕ್ಕ ದುನಿಯಾ ವಿಜಯ್, ಲೂಸ್‌ ಮಾದ ಯೋಗಿ ದೂರವಾಗಿದ್ರಾ

Duniya Vijay Upcoming movie, Vijay And Yogi Blood Relation, Reason For Duniya Vijya And Yogi Fight

Sampriya

ಬೆಂಗಳೂರು , ಸೋಮವಾರ, 20 ಜನವರಿ 2025 (17:51 IST)
Photo Courtesy X
ವಿಜಯ್ ನಾಯಕ ನಟನಾಗಿ ಅಭಿನಯಿಸಿದ ದುನಿಯಾ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಲೂಸ್ ಮಾದ ಯೋಗಿ ಆ ನಂತರ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದರು.

ಸಣ್ಣ ಪಾತ್ರಗಳ ಮೂಲಕ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ವಿಜಯ್‌ಗೆ ದುನಿಯಾ ಸಿನಿಮಾ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಈ ಸಿನಿಮಾದ ಮೂಲಕ ಇಬ್ಬರು ಸ್ಟಾರ್‌ಗಳು ಹುಟ್ಟಿಕೊಂಡರು.

ವಿಶೇಷತೆ ಏನೆಂದರೆ ಇಬ್ಬರಿಬ್ಬರು ರಕ್ತ ಸಂಬಂಧಿಗಳು. ದುನಿಯಾ ವಿಜಯ್ ಅವರ ಅಕ್ಕನ ಮಗನೇ ಯೋಗಿ. ಆದರೆ ಈ ಸಿನಿಮಾದ ಬಳಿಕ ದುನಿಯಾ ವಿಜಯ್ ಹಾಗೂ ಲೂಸ್ ಮಾದ ಯೋಗಿ ಕುಟುಂಬದ ಮಧ್ಯೆ ಬಿರುಕು ಮೂಡಿತ್ತು.

ಇನ್ನೂ ಹೇಳಬೇಕೆಂದರೆ ದುನಿಯಾ ಸಿನಿಮಾಗೆ ಬಂಡವಾಳ ಹೂಡಿದ್ದೆ ಲೂಸ್ ಮಾದ ಯೋಗಿ ಅವರ ತಂದೆ. ವೈಯಕ್ತಿಕ  ವಿಚಾರಕ್ಕೂ ಅಥವಾ ಸಿನಿಮಾ ಸಂಬಂಧಿ ವಿಚಾರಕ್ಕೂ ಇವರಿಬ್ಬರ ಮಧ್ಯೆ ಮನಸ್ತಾಪ ಬಂದಿರುವುದು ತಿಳಿದಿಲ್ಲ.

ಇವರಿಬ್ಬರ ಮಧ್ಯೆ ಮನಸ್ತಾಪವಾಗಿರುವುದು ಗೊತ್ತಿತ್ತು. ಆದರೆ ಈ ಬಗ್ಗೆ ಇಂದು ಮಾತನಾಡಿದ ಯೋಗಿ, ಇದೀಗ ನಮ್ಮ ಕುಟುಂಬದ ಮಧ್ಯೆ ಇದ್ದ ಮನಸ್ತಾಪ ದೂರವಾಗಿ ಚೆನ್ನಾಗಿದ್ದೇವೆ. ಒಳ್ಳೆಯ ಸ್ಕ್ರಿಪ್ಟ್ ಬಂದರೆ ಮುಂದಿನ ದಿನಗಳಲ್ಲಿ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಜಯಮಾಲಾ ಪುತ್ರಿ, ನಟಿ ಸೌಂದರ್ಯ