Select Your Language

Notifications

webdunia
webdunia
webdunia
webdunia

ದುಲ್ಕರ್ ಸಲ್ಮಾನ್ ಪಾನ್ ಇಂಡಿಯಾ ಸಿನಿಮಾಗೆ ಸಾಥ್ ಕೊಟ್ಟ ನಟ ನಾನಿ

ನಟ ದುಲ್ಕರ್ ಸಲ್ಮಾನ್

Sampriya

ಬೆಂಗಳೂರು , ಸೋಮವಾರ, 4 ಆಗಸ್ಟ್ 2025 (18:26 IST)
Photo Credit X
ಬೆಂಗಳೂರು: ತಮ್ಮ ವಿಭಿನ್ನ ಸಿನಿಮಾ ಆಯ್ಕೆ ಮೂಲಕನೇ ಎಲ್ಲರ ಮನಸ್ಸು ಗೆದ್ದಿರುವ ನಟ ದುಲ್ಕರ್ ಸಲ್ಮಾನ್ ಇದೀಗ ಚೊಚ್ಚಲ ನಿರ್ದೇಶಕನ ಜತೆ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. 

ಪ್ರತಿ ಸಿನಿಮಾ ಆಯ್ಕೆಯಲ್ಲೂ ವಿಶೇಷತೆಯನ್ನು ಕಾಪಾಡಿಕೊಂಡಿರುವ ದುಲ್ಕರ್ ಅವರು 41 ನೇ ಚಿತ್ರಕ್ಕಾಗಿ ಚೊಚ್ಚಲ ನಿರ್ದೇಶಕ ರವಿ ನೆಲಕುಡಿಟಿ ಅವರೊಂದಿಗೆ ಸೇರಿಕೊಂಡಿದ್ದಾರೆ.

ಈ ಯೋಜನೆಗೆ ದಸರಾ ನಿರ್ಮಾಪಕ ಸುಧಾಕರ್ ಚೆರುಕುರಿ ಅವರು ತಮ್ಮ ಎಸ್‌ಎಲ್‌ವಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಬೆಂಬಲ ನೀಡಲಿದ್ದಾರೆ. 

ಇದು ಪ್ರೊಡಕ್ಷನ್ ಹೌಸ್‌ನ 10 ನೇ ಉದ್ಯಮ, #SLV10 ಅನ್ನು ಗುರುತಿಸುತ್ತದೆ. ಇಂದು ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಲಾಂಚ್ ಕಾರ್ಯಕ್ರಮದೊಂದಿಗೆ ಹಲವಾರು ವಿಶೇಷ ಅತಿಥಿಗಳು ಈ ಚಲನಚಿತ್ರವನ್ನು ಅಧಿಕೃತವಾಗಿ ಘೋಷಿಸಿದರು. 

ನ್ಯಾಚುರಲ್ ಸ್ಟಾರ್ ನಾನಿ ಅವರು ದುಲ್ಕರ್ ಅವರ ಸಿನಿಮಾದ ಮುಹೂರ್ತಕ್ಕೆ ಕ್ಪಾಪ್ ಹೊಡೆದರು. 

ಪೆದ್ದಿ ನಿರ್ದೇಶಕ ಬುಚ್ಚಿಬಾಬು ಸನಾ ಕ್ಯಾಮರಾ ಸ್ವಿಚ್ ಆನ್ ಮಾಡಿದರೆ, ಗುನ್ನಂ ಸಂದೀಪ್, ನಾನಿ, ರಮ್ಯಾ ಗುನ್ನಂ ಚಿತ್ರಕಥೆಯನ್ನು ತಂಡಕ್ಕೆ ಹಸ್ತಾಂತರಿಸಿದರು. ಮೊದಲ ಶಾಟ್ ಅನ್ನು ರವಿ ನೆಲಕುಡಿಟಿ ಅವರೇ ನಿರ್ದೇಶಿಸಿದ್ದಾರೆ. 

ದಸರಾ ಮತ್ತು ದಿ ಪ್ಯಾರಡೈಸ್ ನಿರ್ದೇಶಕ ಶ್ರೀಕಾಂತ್ ಒಡೆಲಾ ಅವರು ಸಮಾರಂಭದಲ್ಲಿ ಪಾಲ್ಗೊಂಡರು. ಇಂದಿನಿಂದ ರೆಗ್ಯುಲರ್ ಶೂಟಿಂಗ್ ಕೂಡ ಶುರುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಮ್ಯಾಗೆ ಅಶ್ಲೀಲ ಮೆಸೇಜ್, ಜೀವಬೆದರಿಕೆ ದೂರು ಪ್ರಕರಣದಲ್ಲಿ ಬಿಗ್‌ಟ್ವಿಸ್ಟ್‌