Select Your Language

Notifications

webdunia
webdunia
webdunia
webdunia

ನಟಿ ರಮ್ಯಾಗೆ ಅಶ್ಲೀಲ ಮೆಸೇಜ್, ಜೀವಬೆದರಿಕೆ ದೂರು ಪ್ರಕರಣದಲ್ಲಿ ಬಿಗ್‌ಟ್ವಿಸ್ಟ್‌

ನಟಿ ರಮ್ಯಾ ಕೇಸ್

Sampriya

ಬೆಂಗಳೂರು , ಸೋಮವಾರ, 4 ಆಗಸ್ಟ್ 2025 (18:00 IST)
ಬೆಂಗಳೂರು: ನಟಿ ಸಂಸದೆ ರಮ್ಯಾ ಅವರಿಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಶ್ಲೀಲ ಮೆಸೇಜ್ ಹಾಗೂ ಜೀವ ಬೆದರಿಕೆ ಸಂಬಂಧ ಇಂದು ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. 

ಈ ಮೂಲಕ ನಟಿ ರಮ್ಯಾ ನೀಡಿದ ದೂರಿನ ಅನ್ವಯ ಇದುವರೆಗೆ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ. 

ಇದೇ ಪ್ರಕರಣದಲ್ಲಿ ಆಗಸ್ಟ್‌ 2ರಂದು ಟಿ.ಓಬಣ್ಣ ಹಾಗೂ ಗಂಗಾಧರ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಸೋಮವಾರ ಈ ದೂರು ಸಂಬಂಧ ಪ್ರತಿಕ್ರಿಯಿಸಿದ ನಗರ ಪೊಲೀಸ್‌ ಕಮಿಷನರ್‌ ಸೀಮಂತ್‌ಕುಮಾರ್ ಸಿಂಗ್ ಅವರು, ‘ಇನ್‌ಸ್ಟಾಗ್ರಾಂನ 47 ಖಾತೆಗಳಿಂದ ಆರೋಪಿಗಳು ರಮ್ಯಾ ಅವರಿಗೆ ಅಶ್ಲೀಲ ಹಾಗೂ ಬೆದರಿಕೆ ಸಂದೇಶ ಕಳುಹಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಆ ಖಾತೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಇನ್ನೂ ಹೆಚ್ಚಿನವರಿಗೆ ಬಂಧನಕ್ಕೆ ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಖಾತೆದಾರರಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಸು ಫ್ರಮ್ ಸೋ ಭಾನುವಾರದ ದಾಖಲೆ ಏನಾಗಿದೆ ನೋಡಿ