Select Your Language

Notifications

webdunia
webdunia
webdunia
webdunia

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗುತ್ತಿದ್ದಂತೇ ನಟಿ ರಮ್ಯಾ ರಿಯಾಕ್ಷನ್ ನೋಡಿ

ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ

Sampriya

ಬೆಂಗಳೂರು , ಶನಿವಾರ, 2 ಆಗಸ್ಟ್ 2025 (18:34 IST)
Photo Credit X
ಬೆಂಗಳೂರು: ಕಾನೂನು ಎಲ್ಲರಿಗೂ ಒಂದೇ. ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂದು ಪ್ರಜ್ವಲ್ ವಿರುದ್ಧ ಮಹತ್ವದ ಆದೇಶ ಹೊರಬೀಳುತ್ತಿದ್ದ ಹಾಗೇ ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 

ಅತ್ಯಾಚಾರ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಪ್ರಜ್ವಲ್‌ ರೇವಣ್ಣಗೆ ಜೀವವಾಧಿ ಶಿಕ್ಷೆ ವಿಧಿಸಿ, ಆದೇಶ ಪ್ರಕಟಿಸಿದ ಬೆನ್ನಲ್ಳೇ ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿ ಪ್ರತಿಕ್ರಿಯಿಸಿದ್ದಾರೆ. ಮಹಿಳೆಯರ ವಿರುದ್ಧ ಅಪರಾಧ ಎಸಗುವವರಿಗೆ ಕಠಿಣ ಶಿಕ್ಷೆಯಾಗುತ್ತದೆ. ಕಾನೂನು ಎಲ್ಲರಿಗೂ ಒಂದೇ ಎಂದು ಕೋರ್ಟ್ ತೀರ್ಪಿನ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧದ ಸುಪ್ರೀಂ ಕೋರ್ಟ್‌ ವಿಚಾರಣೆಯನ್ನು ಮೆಚ್ಚಿ ನಟಿ ರಮ್ಯಾ ಪೋಸ್ಟ್ ಹಂಚಿಕೊಂಡಿದ್ದರು. ಈ ವಿಚಾರವಾಗಿ ನಟಿಗೆ ನಟ ದರ್ಶನ್ ಫ್ಯಾನ್ಸ್ ಕಡೆಯಿಂದ ಅಶ್ಲೀಲ ಮೆಸೇಜ್‌ಗಳು ಬಂದಿತ್ತು. ಆ ಮೆಸೇಜ್‌ಗಳನ್ನು ಅವರು ತಮ್ಮ ಸ್ಟೋರಿಸ್‌ನಲ್ಲಿ ಹಂಚಿಕೊಂಡು ಡಿ ಬಾಸ್ ಫ್ಯಾನ್ಸ್ ವಿರುದ್ಧ ಕಿಡಿಕಾರಿದ್ದರು. 

ಅದಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್‌ಗೂ ದೂರು ನೀಡಿದ್ದರು. 43 ಅಕೌಂಟ್‌ಗಳ ವಿರುದ್ಧ ನಟಿ ರಮ್ಯಾ ದೂರನ್ನು ನೀಡಿದ್ದರು. ತನಿಖೆಯ ಭಾಗವಾಗಿ ಮೂವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ.

ಪೊಲೀಸರ ಕ್ರಮದ ಬಗ್ಗೆ ನಟಿ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ದೇವರಕೊಂಡ ಸೋಲಿನ ಸರಣಿಯನ್ನು ಕೊನೆಗೊಳಿಸಿದ ಕಿಂಗ್‌ಡಮ್‌: ಗೆಳೆಯನ ಸಕ್ಸಸ್‌ಗೆ ರಶ್ಮಿಕಾ ಫುಲ್ ಹ್ಯಾಪಿ