Select Your Language

Notifications

webdunia
webdunia
webdunia
webdunia

ಸಮಂತಾ ಜತೆಗಿನ ಮದುವೆಗಿಂತಲೂ ಶೋಭಿತಳೊಂದಿಗೆ ಅದ್ಧೂರಿಯಾಗಿ ಹಸೆಮಣೆ ಏರಲಿದ್ದಾರೆ ನಾಗಚೈತನ್ಯ

NagaChitanya

Sampriya

ಬೆಂಗಳೂರು , ಗುರುವಾರ, 22 ಆಗಸ್ಟ್ 2024 (18:05 IST)
Photo Courtesy X
ಬೆಂಗಳೂರು: ಈಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ನಟ ನಾಗ ಚೈತನ್ಯ ಹಾಗೂ ಶೋಭಿತಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಈ ಹಿಂದೆ ನಟಿ ಸಮಂತಾ ರುತ್ ಪ್ರಭು ಅವರನ್ನು ಮದುವೆಯಾಗಿದ್ದ ನಾಗಚೈತನ್ಯ ಅವರು ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದರು. ಆ ನಂತರ ನಟಿ ಶೋಭಿತಾ ಧೂಳಿಪಾಲ ಜತೆ ಪ್ರೀತಿಯಲ್ಲಿ ಬಿದ್ದ ನಾಗಚೈತನ್ಯ ಅವರು ಈಚೆಗೆ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

ಇದೀಗ ಈ ಜೋಡಿ ಹಸೆಮಣೆ ಏರಲು ಸಜ್ಜಾಗುತ್ತಿದ್ದು, ತಯಾರಿ ಮಾಡಿಕೊಳ್ಳುತ್ತಿದ್ದಾರೆಂಬ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.

ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಮದುವೆ ದಿನಾಂಕ ಮತ್ತು ಸ್ಥಳ ಬಹಿರಂಗವಾಗಿದೆ.  ತೆಲುಗು ಮಾಧ್ಯಮಗಳ ವರದಿ ಪ್ರಕಾರ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ವರ್ಷಾಂತ್ಯದಲ್ಲಿ, ಇಲ್ಲದಿದ್ದರೆ 2025ರ ಮಾರ್ಚ್‌ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ.  ಇನ್ನೂ ಮದುವೆಯೂ ರಾಜಸ್ಥಾನ, ಮಧ್ಯಪ್ರದೇಶ ಇಲ್ಲದಿದ್ದರೆ ವಿದೇಶದಲ್ಲಿ ಆಗುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಇನ್ನೂ ಅದ್ಧೂರಿಯಾಗಿ ನಡೆಯುವ ಮದುವೆ ಸಮಾರಂಭಕ್ಕೆ ನೆಂಟರು ಮತ್ತು ಚಿತ್ರರಂಗದ ಗಣ್ಯರಿಗಷ್ಟೇ ಆಹ್ವಾನ ಇದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜನಾಗಿದ್ದವರನ್ನು ಹಾಗೇ ನೋಡಲು ಕಷ್ಟವಾಯಿತು: ದರ್ಶನ್ ಭೇಟಿಯಾದ ರಚಿತಾ ರಿಯ್ಯಾಕ್ಷನ್