Select Your Language

Notifications

webdunia
webdunia
webdunia
webdunia

ವೆಡ್ಡಿಂಗ್‌ ಗೌನ್‌ ಹರಿದು ನ್ಯೂ ಲುಕ್‌ ಕೊಟ್ಟ ಸಮಂತಾ: ಮಾಜಿ ಪತಿ ಮೇಲೆ ಯಾಕಿಷ್ಟು ಕೋಪ ಎಂದ ನೆಟ್ಟಿಗರು

Samantha

Sampriya

ಆಂಧ್ರಪ್ರದೇಶ , ಶುಕ್ರವಾರ, 26 ಏಪ್ರಿಲ್ 2024 (18:51 IST)
Photo Courtesy X
ಸ್ಟಾರ್ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ರುತ್ ಪ್ರಭು ಅವರು ದೂರಾವಾಗಿ 3 ವರ್ಷಗಳಾದರೂ ಇವರ ಅಭಿಮಾನಿಗಳು ಮಾತ್ರ ಮತ್ತೇ ಈ ಜೋಡಿ ಒಂದಾಗಲಿ ಎಂದು ಹಾರೈಸುತ್ತಾರೆ.  ಈ ಜೋಡಿ ಡಿವೋರ್ಸ್ ಪಡೆದು ದೂರವಾದ ನಂತರ ಅವರವರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

 ನಟ ನಾಗಚೈತನ್ಯ ಮಾತ್ರ ತಮ್ಮ ಹೊಸ ಗೆಳತಿ ಶೋಬಿತಾ ಜತೆ ಪ್ರವಾಸದಲ್ಲಿ ಎಂಜಾಯ್ ಮಾಡುತ್ತಿದ್ದಾರೆಂದು ಸುದ್ದಿ ಹರಿದಾಡುತ್ತಿದ್ದೆ. ಇದಕ್ಕೆಲ್ಲ ಅವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೋಗಳು ಸಾಕ್ಷಿ.

ಇನ್ನು ಸಮಂತಾ ಅವರು ತಮ್ಮ ಆರೋಗ್ಯದಲ್ಲಿ ಸಮಸ್ಯೆಗಳನ್ನು ಎದುರಿಸಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  ಅದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಂದರ್ಶಗಳಲ್ಲಿ ಹೇಳಿಕೆಗಳನ್ನು ನೀಡುತ್ತಾ ತಮ್ಮ ವೈಯ್ಯಕ್ತಿಕ ಬದುಕಿನ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಏಪ್ರಿಲ್​ 25ರಂದು ಸಮಂತಾ ಅವರು  ಗ್ಲಾಮರಸ್​ ಫ್ಯಾಶನ್​ ಪ್ರೋಗ್ರಾಮ್​ನಲ್ಲಿ ಕಪ್ಪು ಬಣ್ಣದ ಗೌನ್​ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಹಾಗೇ ಗೌನ್ ಬಗ್ಗೆ ಅಚ್ಚರಿ ಮಾಹಿತಿಯನ್ನು ಹೇಳಿದ್ದಾರೆ.

ಈ ಗೌನ್ ಅವರು ತಮ್ಮ ಮದುವೆ ಸಮಾರಂಭದಲ್ಲಿ ಧರಿಸಲಾಗಿದ್ದ ಗೌನ್​ ಎಂದು ಹೇಳಿಕೊಂಡಿದ್ದಾರೆ. ಇದನ್ನು ಕೇಳಿದ ಅವರ ಅಭಿಮಾನಿಗಳು ಅಚ್ಚರಿಗೆ ಒಳಗಾಗಿದ್ದಾರೆ. ಸುಂದರವಾಗಿದ್ದ ಆಕರ್ಷಕ ವೈಟ್ ವೆಡ್ಡಿಂಗ್ ಗೌನ್ ಅನ್ನು ಹರಿದು ಹಾಕಿದ ನಟಿ ಅದಕ್ಕೆ ಬ್ಲ್ಯಾಕ್ ಡೈ ಡಿಸೈನ್ ಮಾಡಿಸಿಕೊಂಡು ಆಫ್ ಶೋಲ್ಡರ್ ಮಾಡಿಸಿ ಧರಿಸಿದ್ದಾರೆ. ಈ ಒಂದು ಸ್ಪೆಷಲ್ ಗೌನ್ ಸಖತ್ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ನಾಗಚೈತನ್ಯ ಮೇಲೆ ಯಾಕಿಷ್ಟು ಕೋಪ ಎಂದು ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಬದಲಾವಣೆಗಾಗಿ ವೋಟ್‌ ನೀಡಿದ್ದೇನೆ: ವಿಡಿಯೋ ಪೋಸ್ಟ್ ಮಾಡಿದ ಪ್ರಕಾಶ್ ರಾಜ್