Select Your Language

Notifications

webdunia
webdunia
webdunia
webdunia

ಪಟಾಕಿ ಸಿಡಿಸುವ ವೇಳೆ ಮದುವೆ ಮಂಟಪಕ್ಕೆ ಬೆಂಕಿ: 6 ಮಂದಿ ದುರ್ಮರಣ

ಪಟಾಕಿ ಸಿಡಿಸುವ ವೇಳೆ ಮದುವೆ ಮಂಟಪಕ್ಕೆ ಬೆಂಕಿ: 6 ಮಂದಿ ದುರ್ಮರಣ

Sampriya

ದರ್ಭಾಂಗಾ(ಬಿಹಾರ) , ಶುಕ್ರವಾರ, 26 ಏಪ್ರಿಲ್ 2024 (15:14 IST)
ದರ್ಭಾಂಗಾ(ಬಿಹಾರ): ಪಾಟ್ನಾದಲ್ಲಿ ನಿನ್ನೆ ಹೊಟೇಲ್‌ವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು 6 ಮಂದಿ ಸಾವನ್ನಪ್ಪಿದ್ದ ಬೆನ್ನಲ್ಲೇ ಮದುವೆ ಮಂಟಪಕ್ಕೆ ಬೆಂಕಿ ಹೊತ್ತಿಕೊಂಡು 6 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.

ಮೃತರನ್ನು ಸುನೀಲ್ ಪಾಸ್ವಾನ್ (26), ಲೀಲಾ ದೇವಿ (23), ಕಾಂಚನ ದೇವಿ (26), ಸಿದ್ದಾಂತ್ ಕುಮಾರ್ (4), ಶಶಾಂಕ್ ಕುಮಾರ್ ( 3 ) ಮತ್ತು ಸಾಕ್ಷಿ ಕುಮಾರಿ (5) ಮೃತರು.

ಬಹೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಅಲಿನಗರದಲ್ಲಿ ಗುರುವಾರ ರಾತ್ರಿ 11.15 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬರು ಪ್ರತಿಕ್ರಿಯಿಸಿ, ಪಟಾಕಿ ಸಿಡಿಸುವ ವೇಳೆ ಮಂಟಪಕ್ಕೆ ಬೆಂಕಿ ಹೊತ್ತಿಕೊಂಡಿದೆ. ಮಂಟಪದಲ್ಲಿ ಇರಿಸಲಾಗಿದ್ದ ಕೆಲವು ದಹನಕಾರಿ ವಸ್ತುಗಳಿಂದ ಬೆಂಕಿ ವೇಗವಾಗಿ ಹರಡಿಕೊಂಡಿದ್ದರಿಂದ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮೂರು ಹಸುಗಳೂ ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಅಗ್ನಿಶಾಮಕ ದಳಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಸದ್ಯ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಗುನಾಥ ರೆಡ್ಡಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿ ನನ್ನನ್ನು ಚುನಾವನಾ ಪ್ರಚಾರಕ್ಕೆ ಕರೆದಿಲ್ಲ: ಸುಮಲತಾ ಅಂಬರೀಶ್