ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಗಲಿ ಬರೋಬ್ಬರಿ ಹನ್ನೊಂದು ವರ್ಷಗಳಾಗುತ್ತಾ ಬರುತ್ತಿವೆ.
ಈ ನಡುವೆ ಕೊನೆಗೂ ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಮುಹೂರ್ತ ಕೂಡಿಬಂದಿದೆ.
ಮೈಸೂರಿನಲ್ಲಿ ಸೆಪ್ಟಂಬರ್ 15 ರಂದು ಡಾ.ವಿಷ್ಣು ಸ್ಮಾರಕ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಲಿದೆ.
ಸಿಎಂ ಯಡಿಯೂರಪ್ಪರನ್ನು ಭಾರತಿ ವಿಷ್ಣುರ್ಧನ್ ಹಾಗೂ ಅನಿರುದ್ಧ ಈ ಸಂಬಂಧ ಭೇಟಿ ಮಾಡಿದ್ದಾರೆ.