Select Your Language

Notifications

webdunia
webdunia
webdunia
webdunia

ಟಾಲಿವುಡ್ ನ ಸ್ಟಾರ್ ನಟನೊಂದಿಗೆ ಚಿತ್ರ ಖಚಿತಪಡಿಸಿದ ಮೈತ್ರಿ ಮೂವಿ ಮೇಕರ್ಸ್

ಟಾಲಿವುಡ್ ನ ಸ್ಟಾರ್ ನಟನೊಂದಿಗೆ ಚಿತ್ರ ಖಚಿತಪಡಿಸಿದ ಮೈತ್ರಿ ಮೂವಿ ಮೇಕರ್ಸ್
ಹೈದರಾಬಾದ್ , ಶನಿವಾರ, 17 ಏಪ್ರಿಲ್ 2021 (13:18 IST)
ಹೈದರಾಬಾದ್ : ಮೈತ್ರಿ ಮೂವಿ ಮೇಕರ್ಸ್ ಪ್ರಸ್ತುತ ಟಾಲಿವುಡ್ ನ ಅತ್ಯಂತ ಜನಪ್ರಿಯ ನಿರ್ಮಾಣ ಸಂಸ್ಥೆಯಾಗಿದೆ. ಈ ಸಂಸ್ಥೆ ಅನೇಕ ಸ್ಟಾರ್ ಹೀರೊಗಳ ಜೊತೆ ಚಲನಚಿತ್ರ ಮಾಡುತ್ತಿರುತ್ತಾರೆ.

ಇದೀಗ ಮೈತ್ರಿ ಮೂವಿ ಮೇಕರ್ಸ್ ಅವರು ಸ್ಟಾರ್ ನಟ ಪ್ರಭಾಸ್ ಅವರೊಂದಿಗೆ ಚಿತ್ರ ನಿರ್ಮಿಸಲಿದ್ದಾರೆ ಎಂಬುದಾಗಿ ಖಚಿತಪಡಿಸಿದ್ದಾರೆ. ಭಾರತೀಯ ಚಿತ್ರರಂಗದ ಖ್ಯಾತ ನಟ ರೆಬೆಲ್ ಸ್ಟಾರ್ ಪ್ರಭಾಸ್ ಅವರು ಈಗಾಗಲೇ ನಾಲ್ಕು ಯೋಜನೆಗಳನ್ನು ಪೂರೈಸಿದ್ದಾರೆ.  ಮತ್ತು ಈಗ ಮೈತ್ರಿ ಮೂವಿ ಮೇಕರ್ಸ್ ಅವರಿಗಾಗಿ  ಮತ್ತೊಂದು ಯೋಜನೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ.

ಅವರು ಈಗಾಗಲೇ ಪ್ರಭಾಸ್ ಅವರಿಗೆ ಮುಂಗಡ ಹಣವನ್ನು ಪಾವತಿಸಿದ್ದಾರೆ. ಹಾಗೂ  ಈ ಯೋಜನೆಯನ್ನು ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡಲಿದ್ದು, ಈ ಬಗ್ಗೆ ನಿರ್ದೇಶಕ ಸಿದ್ದಾರ್ಥ್ ಮತ್ತು ಪ್ರಭಾಸ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಡಿಯನ್ 2 ಚಿತ್ರವನ್ನು ಪೂರ್ಣಗೊಳಿಸಲು ನಿರ್ದೇಶಕ ಶಂಕರ್ ನಿರ್ಧಾರ