ಬೆಂಗಳೂರು: ಪತಿ ಚಿರಂಜೀವಿ ಅಗಲುವಿಕೆ ನಂತರ ಮಗನ ಪಾಲನೆಯಲ್ಲೇ ಮಗ್ನರಾಗಿರುವ ನಟಿ ಮೇಘನಾ ರಾಜ್ ಈಗ ತಮ್ಮ ಜೀವನದ ಅಮೂಲ್ಯ ವ್ಯಕ್ತಿಯೊಬ್ಬರನ್ನು ಪರಿಚಯಿಸಿದ್ದಾರೆ.
ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ಪೋಸ್ಟ್ ಹಾಕಿದ ಮೇಘನಾ ನನ್ನ ಜೀವನದ ಅತ್ಯಂತ ಪ್ರಮುಖ ವ್ಯಕ್ತಿಯೊಬ್ಬರನ್ನು ಪರಿಚಯಿಸಲಿದ್ದೇನೆ ಎಂದು ಬರೆದಿದ್ದರು. ಇದನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದರು.
ಇದಾದ ಕೆಲವೇ ಕ್ಷಣಗಳಲ್ಲಿ ಅವರು ತಮ್ಮ ಡೆಲಿವರಿ ಮಾಡಿಸಿದ ವೈದ್ಯೆ ಮಾಧುರಿ ಸುಮಂತ್ ಬಗ್ಗೆ ಬರೆದುಕೊಂಡಿದ್ದಾರೆ. ಮಾಧುರಿ ನನ್ನ ವೈದ್ಯೆ ಮಾತ್ರವಲ್ಲ, ನನ್ನ ಕಷ್ಟದ ದಿನಗಳಲ್ಲಿ ಉತ್ತಮ ಸ್ನೇಹಿತೆಯಾಗಿದ್ದರು. ನಾನು ಹಾಗೂ ಬೇಬಿ ಚಿರು ಆರೋಗ್ಯವಾಗಿ ಇರುವಂತೆ ನೋಡಿಕೊಂಡವರು ಇವರು ಎಂದು ವೈದ್ಯೆಯನ್ನು ಕೊಂಡಾಡಿದ್ದಾರೆ. ಅಲ್ಲಿಗೆ ಎಲ್ಲರ ಊಹಾಪೋಹಗಳಿಗೆ ತೆರೆ ಬಿದ್ದಿದೆ.