ಹೈದರಾಬಾದ್ : ಕೊರೊನಾ ಭೀತಿ ನಡುವೆಯೂ ಟಾಲಿವುಡ್ ನಲ್ಲಿ ವಿವಾಹ ಸಂಭ್ರಮ ಮನೆಮಾಡಿದೆ. ನಿತಿನ್, ರಾಣಾ ಬಳಿಕ ಇದೀಗ ಸ್ಟಾರ್ ನಟರೊಬ್ಬರ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆಮಾಡಿದೆ.
ಟಾಲಿವುಡ್ ಖ್ಯಾತ ನಟ ಚಿರಂಜೀವಿಯವರ ಅಣ್ಣ ನಾಗಬಾಬು ಅವರ ಮಗಳು ನಿಹಾರಿಕಾ ತನ್ನ ಗೆಳೆಯ ಚೈತನ್ಯ ರೊಂದಿಗೆ ಆಗಸ್ಟ್ 13 ರಂದು ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಹೈದರಾಬಾದಿನಲ್ಲಿ ಸರಳವಾಗಿ ನಡೆದ ಈ ನಿಶ್ಚಿತಾರ್ಥ ಸಮಾರಂಭಕ್ಕೆ ಚಿರಂಜೀವಿ ಕುಟುಂಬ ಸದಸ್ಯರು ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ.