Select Your Language

Notifications

webdunia
webdunia
webdunia
webdunia

ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಪಾರು ಸೀರಿಯಲ್ ಖ್ಯಾತಿಯ ಮಾನಸಿ ಜೋಶಿ

Paaru Serial Fame Manasi Joshi Marriage

Sampriya

ಬೆಂಗಳೂರು , ಶನಿವಾರ, 1 ಫೆಬ್ರವರಿ 2025 (17:45 IST)
Photo Courtesy X
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾರು ಸೀರಿಯಲ್‌ನಲ್ಲಿ ವಿಲನ್ ಪಾತ್ರದಲ್ಲಿ  ಗಮನ ಸೆಳೆದ ನಟಿ ಮಾನಸಿ ಜೋಶಿ ಅವರು ದಾಂಪತ್ಯ  ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಮೂಲಕ ನಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ನಟ ಮಾನಸಿ ಅವರು ಕಳೆದ ವರ್ಷ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ಎಂಗೇಜ್ಮೆಂಟ್ ಮಾಡಿಸಿಕೊಂಡಿದ್ದರು.

ಇದೀಗ ಇದೇ ಫೆ.16ರಂದು ರಾಘವ್ ಜೊತೆ ನಟಿ ಮದುವೆಗೆ ರೆಡಿಯಾಗಿದ್ದಾರೆ. ಬೆಂಗಳೂರಿನಲ್ಲಿ ಈ ಮದುವೆ ಜರುಗಲಿದೆ. ಸದ್ಯ ಸ್ಪೆಷಲ್ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮೂಲಕ ನಟಿ ಡೇಟ್ ರಿವೀಲ್ ಮಾಡಿದ್ದಾರೆ. ಸೇವ್ ದಿ ಡೇಟ್ ಎಂದಿದ್ದಾರೆ.

 ಮಾನಸಿ ಅವರು ತಮ್ಮ ಮದುವೆಗೆ ಬಿಗ್‌ಬಾಸ್ ಖ್ಯಾತಿಯ, ಪಾರು ಸೀರಿಯಲ್‌ನ ನಾಯಕಿ ಮೋಕ್ಷಿತಾ ಪೈ, ಭಾರತಿ ವಿಷ್ಣುವರ್ಧನ್ ಸೇರಿದಂತೆ ಅನೇಕರಿಗೆ ಮದುವೆಗೆ ಆಹ್ವಾನ ನೀಡಿದ್ದಾರೆ. ಇನ್ನೂ ಹೊಸ ಬದುಕಿಗೆ ಕಾಲಿಡುತ್ತಿರುವ ನಟಿಗೆ ಫ್ಯಾನ್ಸ್ ಶುಭಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಸ್ಸಿಂಗ್ ವಿಡಿಯೋ ವಿವಾದ: ಕೊನೆಗೂ ಮೌನ ಮುರಿದ ಹಿರಿಯ ಗಾಯಕ ಉದಿತ್ ನಾರಾಯಣ್‌