ಶೀಘ್ರದಲ್ಲೇ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸುಳಿವು ನೀಡಿದ್ದ ಖ್ಯಾನ ನಟಿ ಚೈತ್ರಾ ವಾಸುದೇವನ್ ಅವರು ತಮ್ಮ ಭಾವಿ ಪತಿಯ ಪೋಟೋವನ್ನು ಹಂಚಿಕೊಂಡಿದ್ದಾರೆ. ಈಚೆಗೆ 2ನೇ ಮದುವೆಗೆ ಸಜ್ಜಾಗುತ್ತಿರುವ ಚೈತ್ರಾ ಅವರು ಪ್ಯಾರೀಸ್‌ನಲ್ಲಿ ಭರ್ಜರಿ ಶಾಪಿಂಗ್ ಮಾಡಿದ್ದರು.
ಅದಲ್ಲದೆ ಭಾವಿ ಪತಿಯ ಜತೆ ಫೋಟೋಶೂಟ್ ಮಾಡಿಸಿ, ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಆದರೆ ಬಾವಿ ಪತಿಯ ಫೋಟೋವಾಗಲಿ, ಹೆಸರನ್ನಾಗಲಿ ಹೇಳಿರರ್ಲಿಲ್ಲ.
ಈಗ ಭಾವಿ ಪತಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.
ಜಗದೀಪ್ ಎಲ್ ಎಂಬುವರ ಜೊತೆ ಚೈತ್ರಾ ಮದುವೆಗೆ ಸಜ್ಜಾಗಿದ್ದಾರೆ. ಇಬ್ಬರೂ ಪಿಂಕ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಇಬ್ಬರ ಕಣ್ ಕಣ್ಣ ಸಲಿಗೆಯ ಫೋಟೋ ನೋಡಿ ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರಿದ್ದಾರೆ. ಇದೇ ಮಾರ್ಚ್‌ನಲ್ಲಿ ನಟಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಚೈತ್ರಾ ತಮ್ಮ ಡಿಗ್ರಿ ಮುಗಿಯುತ್ತಿದ್ದಂತೆ ಸತ್ಯ ನಾಯ್ಡು ಎನ್ನುವ ಉದ್ಯಮಿ ಜೊತೆ ಮದುವೆಯಾಗಿದ್ದರು. 5 ವರ್ಷಗಳ ಬಳಿಕ ಅದು ಡಿವೋರ್ಸ್‌ನಲ್ಲಿ ದಾಂಪತ್ಯ ಬದುಕು ಅಂತ್ಯವಾಗಿತ್ತು.