Select Your Language

Notifications

webdunia
webdunia
webdunia
webdunia

ಸೆಲೆಬ್ರಿಟಿಗಳ ನೆಚ್ಚಿನ ಹಾಲಿಡೇ ತಾಣವಾಗುತ್ತಿರುವ ಮಾಲ್ಡೀವ್ಸ್

ಸೆಲೆಬ್ರಿಟಿಗಳ ನೆಚ್ಚಿನ ಹಾಲಿಡೇ ತಾಣವಾಗುತ್ತಿರುವ ಮಾಲ್ಡೀವ್ಸ್
ಬೆಂಗಳೂರು , ಬುಧವಾರ, 15 ಜೂನ್ 2022 (08:20 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸೆಲೆಬ್ರಿಟಿಗಳು ಬ್ರೇಕ್ ಬೇಕೆಂದಾಗ, ಹನಿಮೂನ್ ಗಾಗಿ ಆಯ್ಕೆ ಮಾಡಿಕೊಳ್ಳುತ್ತಿರುವ ವಿದೇಶೀ ತಾಣವೆಂದರೆ ಮಾಲ್ಡೀವ್ಸ್. ಕ್ರಿಕೆಟಿಗರಿಂದ ಹಿಡಿದು ಸಿನಿಮಾ, ಕಿರುತೆರೆ ಕಲಾವಿದರವರೆಗೂ ಮಾಲ್ಡೀವ್ಸ್ ನಲ್ಲಿ ರಜೆ ಕಳೆದು ಬರುತ್ತಿದ್ದಾರೆ.

ಐಪಿಎಲ್ ಮುಗಿದ ತಕ್ಷಣ ರೋಹಿತ್ ಶರ್ಮಾ ಪತ್ನಿ ಸಮೇತರಾಗಿ ಮಾಲ್ಡೀವ್ಸ್ ಗೆ ಹೋಗಿದ್ದರು. ಇದಕ್ಕೂ ಮೊದಲು ಶಿಖರ್ ಧವನ್ ಕೂಡಾ ಇಲ್ಲಿ ಹೋಗಿ ಬಂದಿದ್ದರು. ಇದೀಗ ವಿರಾಟ್ ಕೊಹ್ಲಿ ಪತ್ನಿ, ಮಗಳ ಸಮೇತ ಮಾಲ್ಡೀವ್ಸ್ ಬೀಚ್ ನಲ್ಲಿ ಚಿಲ್ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನ ರಿಯಲ್ ಜೋಡಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ದಂಪತಿ ಹುಟ್ಟುಹಬ್ಬದ ಆಚರಣೆಗಾಗಿ ಮಾಲ್ಡೀವ್ಸ್ ಗೆ ತೆರಳಿದ್ದರು. ಈ ಜೋಡಿ ಹನಿಮೂನ್ ಗೂ ಕಳೆದ ವರ್ಷ ಇಲ್ಲಿಗೇ ಬಂದಿದ್ದರು. ಇದಕ್ಕೂ ಮೊದಲು ಕಿರುತೆರೆ ಕಲಾವಿದೆ ರಶ್ಮಿ ಪ್ರಭಾಕರ್ ತಮ್ಮ ಪತಿ ನಿಖಿಲ್ ಜೊತೆ ಹನಿಮೂನ್ ಗೆಂದು ಮಾಲ್ಡೀವ್ಸ್ ನಲ್ಲಿ ಕೆಲವು ಕಾಲ ಕಳೆದುಬಂದಿದ್ದಾರೆ.

ಪ್ರಶಾಂತ್ ವಾತಾವರಣ, ಸಮುದ್ರ ಕಿನಾರೆ, ಅದಕ್ಕೆ ತಕ್ಕ ವಾಸ್ತವ್ಯಕ್ಕೆ ವ್ಯವಸ್ಥೆಯಿಂದಾಗಿ ಮಾಲ್ಡೀವ್ಸ್ ಸೆಲೆಬ್ರಿಟಿಗಳ ಫೇವರಿಟ್ ತಾಣವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ಧಾಂತ್ ಕಪೂರ್ ಡ್ರಗ್ಸ್ ಪ್ರಕರಣ: ಇದು ಸಾಧ್ಯವೇ ಇಲ್ಲ ಎಂದ ತಂದೆ ಶಕ್ತಿ ಕಪೂರ್