Publish Date: Sun, 12 Sep 2021 (17:02 IST)
Updated Date: Sun, 12 Sep 2021 (17:04 IST)
ಕೊಚ್ಚಿ: ಮಲಯಾಳಂನ ಖ್ಯಾತ ಕಿರುತೆರೆ ನಟ ರಮೇಶ್ ವಲಿಯಾಶಲ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಅವರಿಗೆ 54 ವರ್ಷ ವಯಸ್ಸಾಗಿತ್ತು. ನೇಣು ಬಿಗಿದ ಸ್ಥಿತಿಯಲ್ಲಿ ನಟನ ದೇಹ ಅವರ ಮನೆಯಲ್ಲಿ ಪತ್ತೆಯಾಗಿದೆ. ಅವರ ಸಾವು ಆತ್ಮಹತ್ಯೆಯಲ್ಲ ಎಂಬುದು ಅವರ ಆಪ್ತರ ವಾದವಾಗಿದೆ.
ಎರಡು ದಿನಗಳ ಹಿಂದಷ್ಟೇ ಚಿತ್ರೀಕರಣ ಮುಗಿಸಿ ಬಂದಾಗ ರಮೇಶ್ ಸಹಜವಾಗಿಯೇ ಇದ್ದರು. ಇದ್ದಕ್ಕಿದ್ದ ಹಾಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಅವರು ಬರಲು ಸಾಧ‍್ಯವಿಲ್ಲ ಎನ್ನುವುದು ಆಪ್ತರ ವಾದ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.