ಹೈದರಾಬಾದ್: ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಹೆಸರು ಕೆಲವು ನಟರೊಂದಿಗೆ ಥಳುಕು ಹಾಕಿಕೊಂಡಿರಬಹುದು. ಆದರೆ ರಶ್ಮಿಕಾ ಇದುವರೆಗೂ ಡೇಟಿಂಗ್ ಬಗ್ಗೆ ಬಾಯ್ಬಿಟ್ಟಿಲ್ಲ. ಈಗ ತಮ್ಮ ಜೀವನದ ಪ್ರೀತಿ ಪಾತ್ರರ ಬಗ್ಗೆ ಮಾತನಾಡಿದ್ದಾರೆ.
ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ತನ್ನ ಪ್ರೀತಿ ಪಾತ್ರ ಜೀವದ ಜೊತೆಗಿನ ಫೋಟೋ ಪ್ರಕಟಿಸಿದ್ದು, ನಾನು ಬಯಸುವುದು ಇದೇ ಪ್ರೀತಿ ಎಂದಿದ್ದಾರೆ. ಅಷ್ಟಕ್ಕೂ ರಶ್ಮಿಕಾಗೆ ಅಷ್ಟೊಂದು ಪ್ರೀತಿ ಕೊಟ್ಟಿದ್ದು ಯಾರು ಗೊತ್ತಾ?
ಅವರ ಮುದ್ದಿನ ನಾಯಿ ಔರಾ. 10 ದಿನಗಳ ಕಾಲ ಶೂಟಿಂಗ್ ನಿಮಿತ್ತ ಮನೆಯಿಂದ ಹೊರಹೋಗಿದ್ದ ರಶ್ಮಿಕಾ ವಾಪಸ್ ಬಂದಾಗ ಔರಾ ಅವರ ಮೇಲೆರಗಿ ತನ್ನ ಪ್ರೀತಿಯನ್ನು ತೋರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದುವರೆಗೆ ನಾನು ಔರಾನನ್ನು ಇಷ್ಟು ದಿನ ಬಿಟ್ಟಿರಲಿಲ್ಲ. ಈ ರೀತಿಯ ಪ್ರೀತಿಯೇ ನನಗೆ ಬೇಕಾಗಿದ್ದು, ಅದೀಗ ಸಿಕ್ಕಿದೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.