Select Your Language

Notifications

webdunia
webdunia
webdunia
webdunia

ಪ್ರಿನ್ಸ್ ಮಹೇಶ್ ಬಾಬು-ರಾಜಮೌಳಿ ಸಿನಿಮಾದ ಬಜೆಟ್ ಕೇಳಿದ್ರೆ ದಂಗಾಗುವುದು ಗ್ಯಾರಂಟಿ!

ಪ್ರಿನ್ಸ್ ಮಹೇಶ್ ಬಾಬು-ರಾಜಮೌಳಿ ಸಿನಿಮಾದ ಬಜೆಟ್ ಕೇಳಿದ್ರೆ ದಂಗಾಗುವುದು ಗ್ಯಾರಂಟಿ!

Krishnaveni K

ಹೈದರಾಬಾದ್ , ಶುಕ್ರವಾರ, 5 ಜನವರಿ 2024 (09:20 IST)
ಹೈದರಾಬಾದ್: ಟಾಲಿವುಡ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಸ್ಟಾರ್ ನಿರ್ದೇಶಕ ರಾಜಮೌಳಿ ಜೊತೆಯಾಗಿ ಮಾಡುತ್ತಿರುವ ಸಿನಿಮಾ ಬಗ್ಗೆ ಕೊನೆಗೂ ಅಪ್ ಡೇಟ್ ಸಿಕ್ಕಿದೆ.

ಮಹೇಶ್ ಬಾಬು ಮತ್ತು ರಾಜಮೌಳಿ ಜೊತೆಯಾಗಿ ಮಾಡುವ ಸಿನಿಮಾಗೆ ಎಲ್ಲರೂ ಕಾಯುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾ ಬಳಿಕ ರಾಜಮೌಳಿ ಕೈಗೆತ್ತಿಕೊಂಡ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಇದು.

ಇದನ್ನು ದ.ಆಫ್ರಿಕಾದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಿಸಲು ರಾಜಮೌಳಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಭಾರೀ ಬಜೆಟ್ ಮಾಡಿಕೊಂಡಿದ್ದಾರೆ. ಸಿನಿಮಾದ ಬಜೆಟ್ ಸುಮಾರು 1500 ಕೋಟಿ ರೂ. ಇರಲಿದೆ ಎನ್ನಲಾಗಿದೆ. ಸಿನಿಮಾ ಬಜೆಟ್ಟೇ ಇಷ್ಟು ದೊಡ್ಡದಾಗಿರುವಾಗ ರಾಜಮೌಳಿ ಲಾಭ ಪಡೆಯಲು ಅಷ್ಟೇ ದೊಡ್ಡ ಪ್ಲ್ಯಾನ್ ಮಾಡಿಕೊಳ್ಳಬಹುದು.

ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಅಲ್ಲ, ಗ್ಲೋಬಲ್ ಮಟ್ಟದಲ್ಲಿ ಬಿಡುಗಡೆ ಮಾಡಲು ರಾಜಮೌಳಿ ಯೋಜನೆ ಹಾಕಿಕೊಂಡಿದ್ದಾರೆ.  ಇದನ್ನು ಹಾಲಿವುಡ್ ಮಟ್ಟದಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಹೀಗಾಗಿ ಹಾಕಿದ ಬಂಡವಾಳಕ್ಕೆ ತಕ್ಕ ಲಾಭ ಪಡೆಯಲು ತಕ್ಕ ಯೋಜನೆ ರೂಪಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

‘ಕೆಡಿ’ ಮುಗಿದರೂ ‘ಮಾರ್ಟಿನ್’ ಸುದ್ದಿಯೇ ಇಲ್ಲ ಅಂದ ಧ್ರುವ ಸರ್ಜಾ ಫ್ಯಾನ್ಸ್