Publish Date: Sat, 07 Jun 2025 (09:49 IST)
Updated Date: Sat, 07 Jun 2025 (09:52 IST)
ಬೆಂಗಳೂರು: ಸಹನಟಿ ಮೇಲೆ ಅತ್ಯಾಚಾರ, ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ಮಡೆನೂರು ಮನು ಕತೆ ಏನಾಗಿದೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಕಾಮಿಡಿ ಕಿಲಾಡಿಗಳು ನಟ ಮಡೆನೂರು ಮನು ಸಹನಟಿ ಮೇಲೆ ಅತ್ಯಾಚಾರ, ಬಲವಂತವಾಗಿ ಮದುವೆ ಮತ್ತು ಹಲ್ಲೆ ನಡೆಸಿದ ಆರೋಪದಲ್ಲಿ ಕೆಲವೇ ದಿನಗಳ ಹಿಂದೆ ಅರೆಸ್ಟ್ ಆಗಿದ್ದರು. ಎರಡು ದಿನ ಪೊಲೀಸ್ ಕಸ್ಟಡಿ ಬಳಿಕ ಮನುವನ್ನು ನ್ಯಾಯಾಲಯಕ್ಕೆ ನ್ಯಾಯಾಂಗ ಬಂಧನಕ್ಕೊಪ್ಪಿಸಿತ್ತು.
ಇದಾದ ಬಳಿಕ ಮನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಿದ್ದರು. ಇದೀಗ ಮನುಗೆ ಈ ಕೇಸ್ ನಲ್ಲಿ ಜಾಮೀನು ಸಿಕ್ಕಿದೆ. ಹೀಗಾಗಿ ಇಂದು ಮನು ಜೈಲಿನಿಂದ ರಿಲೀಸ್ ಆಗಲಿದ್ದಾರೆ. ಜಾಮೀನು ಪ್ರತಿ ಸಿಕ್ಕ ತಕ್ಷಣ ಅವರು ರಿಲೀಸ್ ಆಗಲಿದ್ದಾರೆ.
ಮಡೆನೂರು ಮನು ಅರೆಸ್ಟ್ ಆಗುವ ಮರು ದಿನ ಅವರು ನಾಯಕರಾಗಿದ್ದ ಚೊಚ್ಚಲ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ರಿಲೀಸ್ ಆಗಿತ್ತು. ಇದರ ಬೆನ್ನಲ್ಲೇ ಶಿವಣ್ಣ, ದರ್ಶನ್ ಬಗ್ಗೆ ಮನು ಕೇವಲವಾಗಿ ಮಾತನಾಡಿದ ಅಡಿಯೋ ರಿಲೀಸ್ ಆಗಿತ್ತು. ಹೀಗಾಗಿ ಅವರನ್ನು ಈಗ ಸ್ಯಾಂಡಲ್ ವುಡ್ ಮತ್ತು ಕಿರುತೆರೆಯಿಂದ ಬ್ಯಾನ್ ಮಾಡಲಾಗಿದೆ.