Select Your Language

Notifications

webdunia
webdunia
webdunia
webdunia

Madenur Manu: ಗಂಡುಗಲಿ ನಾನೇ ಎಂದಿದ್ದ ಮಡೆನೂರು ಮನು ಸಿನಿಮಾ ಬಿಟ್ಟರೆ ಜೀವನಕ್ಕೆ ಗತಿಯೇನು

Madenur Manu

Krishnaveni K

ಬೆಂಗಳೂರು , ಬುಧವಾರ, 28 ಮೇ 2025 (09:59 IST)
ಬೆಂಗಳೂರು: ದರ್ಶನ್, ಶಿವಣ್ಣ ಎಲ್ಲರ ಕತೆಯೂ ಮುಗಿಯಿತು. ಇನ್ನು ಕನ್ನಡ ಚಿತ್ರರಂಗವನ್ನು ಆಳುವ ಗಂಡುಗಲಿ ನಾನೇ ಎಂದು ಮಡೆನೂರು ಮನು ಅವರದ್ದು ಎನ್ನಲಾದ ಅಡಿಯೋ ವೈರಲ್ ಆಗಿದ್ದು ಈಗ ಅವರಿಗೇ ಮುಳುವಾಗಿದೆ. ಚಿತ್ರರಂಗದಿಂದ ಬ್ಯಾನ್ ಆಗಿರುವ ಮನು ಮುಂದಿನ ಜೀವನದ ಗತಿಯೇನು?

ಮಡೆನೂರು ಮನು ಎಂಬ ವ್ಯಕ್ತಿ ಗುರುತಿಸಿಕೊಂಡಿದ್ದು ಕಾಮಿಡಿ ಕಿಲಾಡಿಗಳು ಶೋ ಮೂಲಕ. ಈ ಶೋನಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಿದ್ದ ಮಡೆನೂರು ಮನುಗೆ ಸಾಕಷ್ಟು ಶೋಗಳೂ ಸಿಗುತ್ತಿದ್ದವು. ಇದರ ನಡುವೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದರ ಬೆನ್ನಲ್ಲೇ ತಮ್ಮ ಸ್ವಯಂಕೃತ ಅಪರಾಧಗಳಿಗೆ ಬೆಲೆ ತೆತ್ತಿದ್ದಾರೆ.

ಮಾತು ಆಡಿದರೆ ಹೋಯ್ತು ಅಂತಾರಲ್ಲಾ.. ಹಾಗೆಯೇ ಆಗಿದೆ ಮನು ಜೀವನ. ಹೆಣ್ಣಿನ ಸಹವಾಸಕ್ಕೆ ಬಿದ್ದು ರೇಪ್ ಕೇಸ್ ಎಂದು ಜೈಲಿನಲ್ಲಿ ಕೂತಿರುವ ಮನುಗೆ ಹಳೆಯ ಅಡಿಯೋಗಳೆಲ್ಲಾ ಧುತ್ತನೆ ವೈರಲ್ ಆಗಿ ಈಗ ಬಿದ್ದ ಆಳಿಗೆ ಮತ್ತೊಂದು ಕಲ್ಲು ಎಂಬಂತೆ ಮೇಲೇಳಲಾಗದ ಸ್ಥಿತಿಯಾಗಿದೆ. ಚಿತ್ರರಂಗ, ಕಿರುತೆರೆ ಎರಡರಿಂದಲೂ ಅವರನ್ನು ಬ್ಯಾನ್ ಮಾಡಲಾಗಿದೆ.

ಹೀಗಿದ್ದರೆ ಮನು ಮುಂದಿನ ಜೀವನದ ಕತೆಯೇನು ಎಂಬ ಪ್ರಶ್ನೆ ಬರಬಹುದು. ಮನು ಮೂಲತಃ ತಮ್ಮ ಊರಿನಲ್ಲಿ ಕೃಷಿ ಮಾಡಿಕೊಂಡಿದ್ದ ಅಪ್ಪಟ ಹಳ್ಳಿ ಹೈದ. ಒಂದು ವೇಳೆ ಚಿತ್ರರಂಗ ಮತ್ತು ಕಿರುತೆರೆಯ ನಿಷೇಧ ಹಿಂಪಡೆಯದೇ ಹೋದರೆ ಮನು ಜೀವನ ಸಂಕಷ್ಟಕ್ಕೆ ಸಿಲುಕಲಿದೆ. ಮುಂದೆ ಜಮೀನು ನೋಡಿಕೊಂಡು ಕಾಲಕಳೆಯುವ ಪರಿಸ್ಥಿತಿ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Ananth Nag: ರಾಷ್ಟ್ರಪತಿಗಳಿಂದ ನಟ ಅನಂತನಾಗ್ ಪದ್ಮಭೂಷಣ ಸ್ವೀಕರಿಸಿದ ಕ್ಷಣ ಹೀಗಿತ್ತು video