Webdunia - Bharat's app for daily news and videos

Install App

ಮಡೆನೂರು ಮನು ಮೇಲಿದ್ದ ನಿಷೇಧ ವಾಪಸ್: ವಾಣಿಜ್ಯ ಮಂಡಳಿ ದಯೆ ತೋರಿದ್ದೇಕೆ

Krishnaveni K
ಸೋಮವಾರ, 30 ಜೂನ್ 2025 (16:36 IST)
ಬೆಂಗಳೂರು: ಅತ್ಯಾಚಾರ ಆರೋಪಿಯಾಗಿರುವ ನಟ ಮಡೆನೂರು ಮನು ಮೇಲಿದ್ದ ನಿಷೇಧವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಿಂತೆಗೆದುಕೊಂಡಿದೆ. ಅಷ್ಟಕ್ಕೂ ಮನು ಮೇಲೆ ವಾಣಿಜ್ಯ ಮಂಡಳಿ ಕರುಣೆ ತೋರಿದ್ದು ಯಾಕೆ?

ಸಹನಟಿ ಮೇಲೆ ರೇಪ್ ಮತ್ತು ಬಲವಂತದಿಂದ ಮದುವೆಯಾದ ಆರೋಪದಲ್ಲಿ ಮನು ಬಂಧಿತರಾಗುತ್ತಿದ್ದಂತೇ ಅವರದ್ದು ಎನ್ನಲಾದ ಅಡಿಯೋ ಒಂದು ವೈರಲ್ ಆಗಿತ್ತು. ಇದರಲ್ಲಿ ಮನು ಶಿವಣ್ಣ, ಧ್ರುವ ಸರ್ಜಾ, ದರ್ಶನ್ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ ಧ್ವನಿಯಿದೆ.

ಈ ಹಿನ್ನಲೆಯಲ್ಲಿ ವಾಣಿಜ್ಯ ಮಂಡಳಿ ಅವರಿಗೆ ಚಿತ್ರರಂಗದಿಂದ ನಿಷೇಧ ಹೇರಿತ್ತು. ಆದರೆ ಈಗ ಮನು ಧ್ರುವ ಸರ್ಜಾ, ದರ್ಶನ್ ಮತ್ತು ಶಿವಣ್ಣನಿಗೆ ಕ್ಷಮಾಪಣೆ ಕೇಳಿ ಪತ್ರ ಬರೆದು ವಾಣಿಜ್ಯ ಮಂಡಳಿಗೆ ಸಲ್ಲಿಸಿದ್ದಾರೆ. ಈಗಾಗಲೇ ಮನು ಶಿವಣ್ಣ ಭೇಟಿಗೆ ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ.

ಆದರೆ ಮನು ಕ್ಷಮಾಪಣೆ ಪತ್ರ ನೀಡಿರುವ ಹಿನ್ನಲೆಯಲ್ಲಿ ವಾಣಿಜ್ಯ ಮಂಡಳಿ ಅವರಿಗೆ ಇನ್ನೊಂದು ಅವಕಾಶ ನೀಡಲು ಮುಂದಾಗಿದೆ. ಮನು ವಿವಾದ ಕೋರ್ಟ್ ಮೆಟ್ಟಿಲೇರಿದೆ. ಅವರಿಗೆ ಈಗ ತಮ್ಮ ಕೃತ್ಯದ ಬಗ್ಗೆ ಪಶ್ಚಾತ್ತಾಪವಿದೆ. ಹೀಗಾಗಿ ಒಂದು ಅವಕಾಶ ಕೊಡಲು ತೀರ್ಮಾನಿಸಿದ್ದೇವೆ’ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್ ಬಾಸ್ ಕನ್ನಡ 12 ಗೆ ಕಿಚ್ಚ ಸುದೀಪ ಇರ್ತಾರಲ್ವಾ, ನಮಗೆ ಅಷ್ಟೇ ಸಾಕು ಎಂದ ಫ್ಯಾನ್ಸ್

ಕಾದು ನೋಡಿ ಎಂದಿದ್ದ ಬಿಗ್‌ಬಾಸ್ ಪ್ರಿಯರಿಗೆ ಕಿಚ್ಚ ಸುದೀಪ್ ಕಡೆಯಿಂದ ಸರ್ಪ್ರೈಸ್‌

ಮಡೆನೂರು ಮನು ಮೇಲಿದ್ದ ನಿಷೇಧ ವಾಪಸ್: ವಾಣಿಜ್ಯ ಮಂಡಳಿ ದಯೆ ತೋರಿದ್ದೇಕೆ

ಹೀರೋ ಆಗುವವರೆಗೆ ಫ್ಯಾನ್ಸ್ ಬೇಕು, ಆದ ಮೇಲೆ ಬರ್ತ್ ಡೇ ಆಚರಿಸಲು ಬೇಡ: ನಟ ಗಣೇಶ್ ಟ್ರೋಲ್

ನಟಿ ಶೆಫಾಲಿ ಜರಿವಾಲಾ ಸಾವಿಗೆ ನಿಜ ಕಾರಣ ಕೊನೆಗೂ ಬಯಲು

ಮುಂದಿನ ಸುದ್ದಿ
Show comments