Select Your Language

Notifications

webdunia
webdunia
webdunia
webdunia

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವೃಕ್ಷಮಾತೆ ಚಿತ್ರತಂಡ

Sampriya

ಬೆಂಗಳೂರು , ಸೋಮವಾರ, 16 ಜೂನ್ 2025 (16:29 IST)
Photo Credit X
ಬೆಂಗಳೂರು: ಸಿನಿಮಾ ತಂಡದ ಮೇಲೆ ಸಾಲು ಮರ ತಿಮ್ಮಕ್ಕ ದೂರು ನೀಡಿದ ಘಟನೆ ವರದಿಯಾಗಿದೆ. ಪರಿಸರ ರಕ್ಷಣೆಯಲ್ಲಿ ಅವರ ಕೊಡುಗೆಯನ್ನು ಸಾಲು ಮರದ ತಿಮ್ಮಕ್ಕರ ಸಾಧನೆಯನ್ನು ಸಿನಿಮಾ ಮಾಡಲು ಹೊರಟ ಚಿತ್ರತಂಡದ ವಿರುದ್ಧ ಅವರು ದೂರನ್ನು ನೀಡಿದ್ದಾರೆ. ಈ ಸಿನಿಂಆಗೆ ‘ವೃಕ್ಷ ಮಾತೆ’ ಎಂಬ ಶೀರ್ಷಿಕೆ ಇಡಲಾಗಿದೆ. ಆದರೆ, ಈ ಸಿನಿಮಾ ಮಾಡಬಾರದು ಎಂದು ಸ್ವತಃ ತಿಮ್ಮಕ್ಕ ಅವರೇ ಫಿಲ್ಮ್ ಚೇಂಬರ್​ಗೆ ಬಂದು ದೂರು ಕೊಟ್ಟಿದ್ದಾರೆ.

‘ಶ್ರೀಲಕ್ಷ್ಮಿ ವೆಂಕಟೇಶ್ವರ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ‘ವೃಕ್ಷಮಾತೆ’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರವನ್ನು ದಿಲೀಪ್ ಕುಮಾರ್ ಎಚ್.ಆರ್., ಸೌಜನ್ಯ ಡಿ.ವಿ, ಎ. ಸಂತೋಷ್ ಮುರಳಿ, ಒರಟ ಶ್ರೀ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ಒರಟ ಶ್ರೀ ನಿರ್ದೇಶನ ಮಾಡುತ್ತಿದ್ದಾರೆ. ಸಿದ್ದೇಶ್ ಅವರು ಬರೆದಿರುವ ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’ ಕೃತಿಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ. ಆದರೆ, ಇದಕ್ಕೆ ಸಾಲು ಮರದ ತಿಮ್ಮಕ್ಕ ಅವರೇ ವಿರೋಧ ಹೊರಹಾಕಿದ್ದಾರೆ.

ಎರದು ದಿನಗಳ ಹಿಂದೆ ಚಿತ್ರತಂಡ ಶೂಟಿಂಗ್ ಮಾಡುತ್ತಿತ್ತು. ಈ ವೇಳೆ ತಂಡವನ್ನು ಸ್ಟೇಷನ್​ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ‘ವೃಕ್ಷಮಾತೆ’ ಸಿನಿಮಾಗೆ ಸಾಲು ಮರದ ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ಅವರಿಂದ ಅನುಮತಿ ಪಡೆದಿಲ್ಲ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದರು. ಈಗ ಫಿಲ್ಮ್​ ಚೇಂಬರ್​ಗೆ ಆಗಮಿಸಿ ಸಾಲು ಮರದ ತಿಮ್ಮಕ್ಕ ದೂರು ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ