Webdunia - Bharat's app for daily news and videos

Install App

ಹೀರೋ ಆಗುವವರೆಗೆ ಫ್ಯಾನ್ಸ್ ಬೇಕು, ಆದ ಮೇಲೆ ಬರ್ತ್ ಡೇ ಆಚರಿಸಲು ಬೇಡ: ನಟ ಗಣೇಶ್ ಟ್ರೋಲ್

Krishnaveni K
ಸೋಮವಾರ, 30 ಜೂನ್ 2025 (11:06 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಈ ಬಾರಿಯೂ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ. ಇದಕ್ಕೆ ಹಲವರು ಟ್ರೋಲ್ ಮಾಡಿದ್ದು, ಹೀರೋ ಆಗುವವರೆಗೆ ಮಾತ್ರ ಫ್ಯಾನ್ಸ್ ಬೇಕು. ಆದ ಮೇಲೆ ಬರ್ತ್ ಡೇ ಆಚರಿಸಲು ಫ್ರೆಂಡ್ಸ್ ಸಾಕು ಅಲ್ವಾ ಎಂದಿದ್ದಾರೆ.

ಜುಲೈ 2 ರಂದು ನಟ ಗಣೇಶ್ ಹುಟ್ಟುಹಬ್ಬ. ಇದಕ್ಕೆ ಎರಡು ದಿನ ಬಾಕಿ ಇರುವಾಗ ಗಣೇಶ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಒಂದು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ನಲ್ಲಿ ಈ ಬಾರಿ ಮನೆ ಬಳಿ ಬರಬೇಡಿ ಎಂದಿದ್ದಾರೆ. ಇದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣೇಶ್ ಪೋಸ್ಟ್ ನಲ್ಲಿ ಏನಿದೆ?
‘ಆತ್ಮೀಯ ಅಭಿಮಾನಿ ಸ್ನೇಹಿತರೇ, ಜುಲೈ 2 ರಂದು ನಾನು ಹುಟ್ಟಿದ ದಿನ. ಸಹಜವಾಗಿ ನನಗದು ನಿಮ್ಮ ಪ್ರೀತಿ ಹಾಗೂ ಅಭಿಮಾನವನ್ನು ಅತ್ಯಂತ ಸಮೀಪದಿಂದ ಕಣ್ತುಂಬಿಕೊಂಡು ಸಂಭ್ರಮಿಸುವ ದಿನ. ಆದರೆ ಈ ಬಾರಿ ನಾನು ಪಪಿನಾಕ ಹಾಗೂ ಯುವರ್ ಸಿನ್ಸಿಯರ್ಲೀ ರಾಮ್ ಚಿತ್ರಗಳ ಹೊರಾಂಗಣ ಚಿತ್ರೀಕರಣಗಳಲ್ಲಿ ಭಾಗವಹಿಸಬೇಕಿರುವ ಕಾರಣ ಜುಲೈ 2 ರಂದು ನಾನು ನಿಮ್ಮೆಲ್ಲರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮನ್ನು ರಂಜಿಸುವುದಕ್ಕಿಂತ ದೊಡ್ಡ ಹಬ್ಬ ನನಗೆ ಮತ್ತೊಂದಿಲ್ಲ. ಆದ ಕಾರಣ ಯಾರೂ ಮನೆಯ ಬಳಿ ಬರದೇ, ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ತಾವುಗಳು ಇದ್ದಲ್ಲಿಂದಲೇ ನನಗೆ ಆಶಿಸಿ ಆಶೀರ್ವದಿಸಬೇಕೆಂದು ಈ ಮೂಲಕ ವಿನಂತಿಸುತ್ತೇನೆ’ ಹೀಗೆಂದು ಗಣೇಶ್ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಅದರಲ್ಲಿ ಒಬ್ಬರಂತೂ ಹೀರೋ ಆಗುವವರೆಗೂ ನಿಮಗೆ ಫ್ಯಾನ್ಸ್ ಬೆಂಬಲ ಬೇಕು. ಹೀರೋ ಆಗುವವರೆಗೂ ಒಂದು ಮುಖ, ಹೀರೋ ಆದ್ಮೇಲೆ ಒಂದು ಮುಖ. ನಿಮ್ಮ ಮನೆ ಹತ್ರ ಬಂದು ಏನಾದ್ರೂ ದುಡ್ಡ ಕೇಳ್ತಾರಾ ಅಭಿಮಾನಿಗಳು ಒಂದು ದಿನ ನಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳೋ ಆಸೆ ಆದ್ರೆ ನೀವು ನಿಮ್ಮ ಫ್ಯಾಮಿಲಿ ಫ್ರೆಂಡ್ ಜೊತೆ ಟೈಂ ಕೊಟ್ಟು ಚೆನ್ನಾಗಿ ಸಂಭ್ರಮಿಸುತ್ತೀರಿ. ಸ್ವಲ್ಪ ಫ್ಯಾನ್ಸ್ ಗೂ ಟೈಮ್ ಕೊಡ್ರಪ್ಪ ಎಂದಿದ್ದಾರೆ. ಮತ್ತೆ ಕೆಲವರು ನಿಮ್ಮದು ಇದೇ ಆಯ್ತು ಗೋಳು ಎಂದಿದ್ದಾರೆ. ಇನ್ನು ಹಲವರು ಮುಂಚಿತವಾಗಿಯೇ ವಿಶ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಜೈಲಲ್ಲೂ ದರ್ಶನ್‌ಗೆ ಡೆವಿಲ್ ಸಿನಿಮಾದ್ದೇ ಚಿಂತೆ

ವಿಶೇಷ ದಿನದಂದೇ ಮಗನಿಗೆ ನಾಮಕರಣ ಮಾಡಿದ ಸಿಂಹಪ್ರಿಯ ದಂಪತಿ

ಅಜಯ್ ರಾವ್ ವಿಚ್ಛೇದನಕ್ಕೆ ಕಾರಣ ಬಯಲು

ದರ್ಶನ್ ಅರೆಸ್ಟ್ ಆಗಿದ್ದಕ್ಕೆ ರಮ್ಯಾ ಅಚ್ಚರಿಯ ಹೇಳಿಕೆ

ಮುಂದಿನ ಸುದ್ದಿ
Show comments