Select Your Language

Notifications

webdunia
webdunia
webdunia
webdunia

ಇಷ್ಟೊಂದು ಧ್ವೇಷಿಸಬೇಡಿ, ಒಂದು ತೊಟ್ಟು ವಿಷ ಕೊಡಿ ಸಾಕು: ಮಡೆನೂರು ಮನು

Madenur Manu

Krishnaveni K

ಬೆಂಗಳೂರು , ಶನಿವಾರ, 12 ಜುಲೈ 2025 (10:24 IST)
ಬೆಂಗಳೂರು: ನನ್ನ ಇಷ್ಟೊಂದು ಧ್ವೇಷಿಸಬೇಡಿ. ಇದರ ಬದಲು ಒಂದು ತೊಟ್ಟು ವಿಷ ಕೊಡಿ ಸಾಕು. ಏನು ದೃಷ್ಟಿ ಬಿತ್ತೋ, ಏನೋ ನನ್ನ ದುರಾದೃಷ್ಟ ಈ ರೀತಿ ಆಗಿದೆ ಎಂದು ಮಡೆನೂರು ಮನು ಪತ್ರಿಕಾಗೋಷ್ಠಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.

ಸಹ ನಟಿ ಮೇಲೆ ಅತ್ಯಾಚಾರ, ಬಲವಂತದಿಂದ ತಾಳಿ ಕಟ್ಟಿದ ಆರೋಪಕ್ಕೊಳಗಾಗಿ ಜೈಲು ಸೇರಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಅವರದ್ದು ಎನ್ನಲಾದ ಅಡಿಯೋ ಒಂದು  ವೈರಲ್ ಆಗಿತ್ತು. ಈ ಅಡಿಯೋದಲ್ಲಿ ಶಿವಣ್ಣ, ಧ್ರುವ ಸರ್ಜಾ, ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದರಿಂದಾಗಿ ಅವರಿಗೆ ಈಗ ಚಿತ್ರರಂಗದಲ್ಲಿ ಅವಕಾಶವಿಲ್ಲದಂತಾಗಿದೆ.

ಇದೀಗ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ನಾನು ಯಾರಿಗೂ ಸಾವು ಬಯಸಲ್ಲ. ಡ್ರಿಂಕ್ಸ್ ಒಳಗೆ ಏನೋ ಮಿಕ್ಸ್ ಮಾಡಿ ಹೀಗೆಲ್ಲಾ ಆಗಿದೆ. ಮೂರು ವರ್ಷದಿಂದ ಡಯಟ್ ಮಾಡುತ್ತಿದ್ದರಿಂದ ಕುಡಿಯುತ್ತಿರಲಿಲ್ಲ. ಆ ಅಡಿಯೋ ಸತ್ಯ ಆಗಿದ್ದರೆ ಅದನ್ನು ಡಿಲೀಟ್ ಮಾಡಿಸುತ್ತಿದ್ದೆ. ಇಷ್ಟುವರ್ಷದಿಂದ ಕಷ್ಟಪಟ್ಟು ಬಂದವನು ಹೀಗೆ ಯಾಕೆ ಮಾಡ್ತೀನಿ. ನನಗೆ ಹಣವೂ ಇಲ್ಲ ಬ್ಯಾಕ್ ಗ್ರೌಂಡ್ ಇಲ್ಲ. ನನಗೆ ದುಡ್ಡು ಇದ್ದಿದ್ರೆ ಅವರನ್ನು ನೇರವಾಗಿ ಹೋಗಿ ಹೊಡೆಸುತ್ತಿದ್ದೆ.

ಆ ಲೇಡಿ ಮನೆಯಲ್ಲಿ ನನಗೆ ಒಂದು ಡ್ರಿಂಕ್ಸ್ ನೀಡಲಾಗಿತ್ತು. ಅದರಲ್ಲಿ ಏನೋ ಮಿಕ್ಸ್ ಮಾಡಿದ್ದರು ಎಂದು ಅನುಮಾನವಿದೆ. ಆ ಅಡಿಯೋ ಫ್ರೆಂಡ್ಸ್ ಸರ್ಕಲ್ ಬಳಿಯಿತ್ತು. ಅದನ್ನು 50000 ರೂ. ಕೊಟ್ಟು ಖರೀದಿ ಮಾಡಿದ್ದಾರಂತೆ. ಹೀಗಾಗಿ ಆ ಅಡಿಯೋ ಯಾರು ರಿಲೀಸ್ ಮಾಡಿದ್ದು ಎಂದು ಗೊತ್ತಾಗಿದೆ. ನನ್ನ ಮೇಲೆ ಇಷ್ಟು ಧ್ವೇಷ ಸಾಧಿಸುವ ಬದಲು ವಿಷ ಕೊಡಿ ಎಂದಿದ್ದಾರೆ ಮಡೆನೂರು ಮನು.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಸ್ಟೈಲ್ ನಲ್ಲಿ ಸೀರಿಯಲ್ ನಟಿಯ ಕೊಲೆಗೆ ಪತಿಯಿಂದ ಯತ್ನ: ಆಸ್ಪತ್ರೆಗೆ ದಾಖಲು