Select Your Language

Notifications

webdunia
webdunia
webdunia
webdunia

ಇಂದು ಥಿಯೇಟರ್ ನಲ್ಲಿ ಲವ್ ಮಾಕ್ಟೈಲ್ ಹವಾ ಶುರು..

ಇಂದು ಥಿಯೇಟರ್ ನಲ್ಲಿ ಲವ್ ಮಾಕ್ಟೈಲ್  ಹವಾ ಶುರು..
ಬೆಂಗಳೂರು , ಶುಕ್ರವಾರ, 31 ಜನವರಿ 2020 (14:09 IST)
ಕೆಲವು ಸಿನ್ಮಾಗಳೇ ಹಾಗೆ, ಶುರುವಾದಾಗಿನಿಂದ ಟೈಟಲ್,ಟ್ರೈಲರ್ ,ಟೀಸರ್, ಪೋಸ್ಟರ್ ಗಳಿಂದಲೇ ಸದ್ದು ಮಾಡೋಕೆ ಶುರುಮಾಡಿರ್ತಾವೆ. ಆ ಪೈಕಿಗೆ ಸೇರಿದ್ದು ಈ  ಲವ್ ಮಾಕ್ಟೈಲ್ ಚಿತ್ರ. ಸ್ಯಾಂಡಲ್ವುಡ್ ನಲ್ಲಿ ಡಾರ್ಲಿಂಗ್ ಕೃಷ್ಣ ಅಂತಲೇ ಫೇಮಸ್ ಆಗಿರೋ ಕೃಷ್ಣ ನ ಪ್ರೇಮ ಪುರಾಣದ ಹೊಸ ಕಹಾನಿಯೇ ಈ ಲವ್ ಮಾಕ್ಟೈಲ್. 

ಹೈಸ್ಕೂಲಿನಿಂದಲೇ ಹೃದಯದಲ್ಲಿ ಮೊಳಕೆಯೊಡೆದಿರೋ ಪ್ಯೂರ್ ಪ್ರೀತಿಗೆ  ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಧ್ವನಿ ಕೊಟ್ಟು  ಭರ್ಜರಿಯಾಗೇ ಸಾಥ್ ನೀಡಿರೋ ಚಿತ್ರವಿದು. ಯುವಮನಸ್ಸುಗಳಿಗೆ ಪ್ರೀತಿಯ ಕಿಚ್ಚು ಹತ್ತಿಸೋ ಈ ಲವ್ ಮಾಕ್ಟೈಲ್ ಸಿನಿಮಾ ತನ್ನ ಟ್ರೈಲರ್ ಹಾಗೂ ಲವ್ ಯೂ ಚಿನ್ನಾ ಎನ್ನುವ ಮೆಲೊಡಿಯಸ್ ಹಾಡಿನಿಂದ ಪ್ರೇಕ್ಷಕರ ಮನಸೂರೆಗೊಳಿಸಿ ಈಗ ರಿಲೀಸ್ ಆದ ಹಾಡುಗಳ ಮೂಲಕ ಭರ್ಜರಿ  ಕುತೂಹಲ ಹುಟ್ಟುಹಾಕಿದೆ. 
 
 ಆಲ್ರೆಡಿ ಗಾಂಧಿನಗರದ ಮಂದಿಯ ನಿದ್ರೆ ಕದ್ದಿರೋ ಲವ್ಮಾಕ್ಟೈಲ್  ನಲ್ಲಿ ಇಷ್ಟುದಿನಗಳ ಕಾಲ ಸ್ಯಾಂಡಲ್ವುಡ್ನಲ್ಲಿ ಹೀರೊ ಆಗಿ ಮಿಂಚಿದ್ದ ಡಾರ್ಲಿಂಗ್ ಕೃಷ್ಣ ನಟನಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳೊದರ ಜೊತೆಗೆ ನಿರ್ಮಾಪಕನಾಗಿಯೂ ಮಿಂಚಲಿದ್ದಾರೆ. ಜೊತೆಗೆ ನಿರ್ದೆಶಕನ ಕ್ಯಾಪ್ ಕೂಡ ಧರಿಸಿ ಕೃಷ್ಣ ಹೊಸ ಕಮಾಲ್ ತೋರಿಸಲಿದ್ದಾರೆ. ಇನ್ನು ಇವರಿಗೆ  ನಾಯಕಿಯಾಗಿ ಕಾಣಿಸಿಕೊಂಡು ಕಮಾಲ್ ಮಾಡೋದ್ರ  ಜೊತೆಗೆ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ ನಟಿ ಮಿಲನ ನಾಗರಾಜ್. 
 
ಇಷ್ಟೊಳ್ಳೆ ಲವ್ ಸ್ಟೋರಿಗೆ ಸ್ಯಾಂಡಲ್ವುಡ್ನಲ್ಲಿ ತಮ್ಮ ಯೂನಿಕ್ ಮ್ಯೂಸಿಕ್ ಕಂಪೋಸಿಂಗ್ ಮೂಲಕ ಕೇಳುಗರ ಮನಸ್ಸುಗಳನ್ನ ಕದ್ದಿರೋ ರಘು ದೀಕ್ಷಿತ್ ಸಂಗೀತ ಸಂಯೋಜಿಸಿದ್ದು ಒಂದೊಳ್ಳೆ ಪ್ರೇಮ ಕಥೆಯೊಂದಿಗೆ ಇದೇ 31 ಕ್ಕೆ ತೆರೆಮೇಲೆ ರಾರಾಜಿಸಲು ರೆಡಿ ಇದೆ.ಇನ್ನೇನಿದ್ರು ತಂಡ ಹೊಸ ಸಾಹಸಕ್ಕೆ ಸಿನಿಪ್ರಿಯರು ಜೈ ಅನ್ನೊದೊಂದೇ ಬಾಕಿ ಉಳಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ – ರಾಧಿಕಾ ಕುಟುಂಬದಿಂದ ವಿಶೇಷ ಯಜ್ಞ, ಯಾಗ