Select Your Language

Notifications

webdunia
webdunia
webdunia
webdunia

ಗಾಡಿ ಓಡಿಸುವಾಗ ನೋಡ್ಕೊಳ್ಳಿ! ಅಭಿಮಾನಿಗಳಿಗೆ ನಟ ದರ್ಶನ್ ಮನವಿ

ಗಾಡಿ ಓಡಿಸುವಾಗ ನೋಡ್ಕೊಳ್ಳಿ! ಅಭಿಮಾನಿಗಳಿಗೆ ನಟ ದರ್ಶನ್ ಮನವಿ
ಬೆಂಗಳೂರು , ಬುಧವಾರ, 30 ಅಕ್ಟೋಬರ್ 2019 (09:32 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತು ಎಂದರೆ ಚಾಚೂ ತಪ್ಪದೇ ಪಾಲಿಸುವ ಅಪ್ಪಟ ಅಭಿಮಾನಿಗಳಿದ್ದಾರೆ. ಇಂತಹ ಅಭಿಮಾನಿಗಳಲ್ಲಿ ಡಿ ಬಾಸ್ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.


ಅಜಾಗರೂಕತೆಯಿಂದ ಚಾಲನೆ ಮಾಡಿ ನಿಮ್ಮ ಮನೆಯವರಿಗೂ ತೊಂದರೆ ಕೊಡಬೇಡಿ ಎಂದು ದರ್ಶನ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸಾಮಾಜಿಕ ಕಳಕಳಿಯ ಸಂದೇಶ ಬರೆದಿದ್ದಾರೆ.

‘ಅಭಿಮಾನಿಗಳಲ್ಲಿ ಮನವಿ. ಗಾಡಿಯಲ್ಲಿ ಚಲಿಸುವಾಗ ದಯಮಾಡಿ ಅತೀ ಜಾಗೃತೆಯಿಂದ ಓಡಿಸಿ. ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಮರೆಯಬೇಡಿ. ಕೆಲವೊಮ್ಮೆ ನಮ್ಮ ಪ್ರಜ್ಞೆಯಲ್ಲಿದ್ದರೂ ದುರಾದೃಷ್ಟವಶಾತ್ ಅಪಘಾತಗಳು ಸಂಭವಿಸುತ್ತವೆ. ಕಳೆದ ವರ್ಷ ವಿನೀಶ್ ಹುಟ್ಟುಹಬ್ಬದ ವೇಳೆ ನಡೆದ ಅಪಘಾತದಲ್ಲಿ ಅಭಿಮಾನಿಯೊಬ್ಬ ಸಾವನ್ನಪ್ಪಿದ್ದು ಇನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ದೂರದ ಸ್ಥಳಗಳಿಗೆ ಹೋಗುವಾಗ ದ್ವಿಚಕ್ರ ವಾಹನಗಳನ್ನು ಆದಷ್ಟು ಉಪಯೋಗಿಸಬೇಡಿ. ಈ ವರ್ಷವೂ ಹುಟ್ಟುಹಬ್ಬಕ್ಕೆ ಬರುವವರು ದಯಮಾಡಿ ಎಚ್ಚರವಹಿಸಿ’ ಎಂದು ದರ್ಶನ್ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಿನಿಸ್ಟರ್ ಸಿಟಿ ರವಿ ಈಗ ಆಕ್ಟರ್! ನಟ ಜೆಕೆ ಜತೆ ಆಲ್ಬಮ್ ಹಾಡಿನಲ್ಲಿ ಸಚಿವರು!