Select Your Language

Notifications

webdunia
webdunia
webdunia
webdunia

ಲವ್ ಮಾಕ್ಟೈಲ್ ಮೆಚ್ಚಿದ ಕಿಚ್ಚ ಹೇಳಿದ್ದೇನು..?

ಲವ್ ಮಾಕ್ಟೈಲ್ ಮೆಚ್ಚಿದ ಕಿಚ್ಚ ಹೇಳಿದ್ದೇನು..?
ಬೆಂಗಳೂರು , ಸೋಮವಾರ, 3 ಫೆಬ್ರವರಿ 2020 (15:28 IST)
ಟೈಟಲ್ ಹಾಗು ಹಾಡುಗಳ ಮೂಲಕ ಕ್ಯೂರಿಯಾಸಿಟಿ ಮೇಲೆ ಕ್ಯೂರಿಯಾಸಿಟಿ ಹುಟ್ಟುಹಾಕಿದ್ದ ಲವ್ ಮಾಕ್ಟೈಲ್ ಸಿನ್ಮಾ ಶುಕ್ರವಾರ ರಿಲೀಸ್ ಆಗಿದ್ದಾಗಿದೆ. ನವೀರಾದ ಪ್ರೇಮಕಥೆಯಲ್ಲೇ ಹಲವು ಭಾವನೆಗಳನ್ನು ವ್ಯಕ್ತಪಡಿಸೋ ಲವ್ ಮಾಕ್ಟೈಲ್ ಗೆ ಸಿನಿಪ್ರೇಮಿಗಳು ಫಿದಾ ಆಗಿದ್ದಾರೆ.ಥಿಯೇಟರ್ ನಲ್ಲಿ ಕೂತ ಪ್ರೇಕ್ಷಕ ಲವ್ ಮಾಕ್ಟೈಲ್ ನೋಡಿ ಜೈ ಹೋ ಅಂದಿದ್ದಾಯ್ತು.
ಆದ್ರೆ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಮೊದಲಿನಿಂದ ಸಿನ್ಮಾಗೆ ಸಾಥ್ ಕೊಡ್ತಿರೋದ್ರಿಂದ ಸಿನ್ಮಾ ನೋಡಿದ ಕಿಚ್ಚ ಏನ್ ಹೇಳ್ತಾರೆ ಅನ್ನೂ ಕುತೂಹಲವಿತ್ತು.ಆದ್ರೆ ಅದಕ್ಕೀಗ ಉತ್ತರ ಸಿಕ್ಕಾಗಿದೆ. ಹೌದು ಚಿತ್ರತಂಡ ಆಯೋಜಿಸಿದ್ದ ಸೆಲೆಬ್ರೆಟಿ ಶೋ ನಲ್ಲಿ ಲವ್ ಮಾಕ್ಟೈಲ್ ಸವಿದ ಕಿಚ್ಚ ಫುಲ್ ಖುಷ್ ಆಗಿದ್ದು ಮೊದಲ ನಿರ್ದೇಶನದೊಂದಿಗೆ ಡಾರ್ಲಿಂಗ್ ಕೃಷ್ಣ ಕಥೆಯನ್ನ ನೆರೇಟ್ ಮಾಡಿದ ರೀತಿಗೆ ಫಿದಾ ಆಗಿದ್ದಾರೆ. ಕಥೆಯನ್ನು ಇಷ್ಟ ಪಟ್ಟಿರೋ ಕಿಚ್ಚ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿ ಸಿನೆಮಾ ಕುರಿತಾದ ತಮ್ಮ ಅನಿಸಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
webdunia
 ಇನ್ನು  ಬ್ಯೂಟಿಫುಲ್ ಲವ್ ಸ್ಟೋರಿನ ಹೊತ್ತು ತೆರೆಮೇಲೆ ಅಪ್ಪಳಿಸಿರೋ  'ಲವ್ ಮಾಕ್ಟೈಲ್'  ಡಾರ್ಲಿಂಗ್ ಕೃಷ್ಣ  ಹಾಗೂ ಮಿಲನ ನಾಗಾರಾಜ್ ನಾಯಕ-ನಾಯಕಿ ಯಾಗೋದ್ರ ಜೊತೆಗೆ ಬಂಡವಾಳ ಹಾಕಿ,ಡಾರ್ಲಿಂಗ್ ಕೃಷ್ಣ ಈ ಮೂಲಕ ನಿರ್ದೇಶಕ, ನಿರ್ಮಾಪಕ ಹಾಗು ನಟ ನಾಗಿಯೂ ಬಡ್ತಿ ಪಡೆದಿದ್ದಾರೆ.ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ನಿರ್ದೇಶನ ಕಿಕ್ ಕೊಟ್ಟಿದ್ದು,ಸಿನೆಮಾ ನೋಡಿದ ಪ್ರೇಕ್ಷಕ ರ ಬಾಯಲ್ಲಿ ವಾವ್..! ವಾಟ್ ಎ ಮೂವಿ ಅನ್ನೋ ಖುಷಿಯೇ ತುಂಬಿದೆ. ಸಧ್ಯ ಈ ವೀಕೆಂಡ್ ಚಿತ್ರದ ಗುಡ್ ರಿವ್ಯೂವ್ಸ್ ಕೇಳ್ತಾ ಸಂಭ್ರಮಿಸ್ತಿರೋ ಲವ್ ಮಾಕ್ಟೈಲ್  ಸಂತೋಷದ ಕಿಕ್ ಸ್ಟಾರ್ಟ್ ನಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕಣ್ಣ ಕಾಮಿಡಿ ಹೂರಣ ತುಂಬಿರೋ ಬಿಲ್ಗೇಟ್ಸ್ ಫೆಬ್ರವರಿ 7ಕ್ಕೆ ರಿಲೀಸ್