Select Your Language

Notifications

webdunia
webdunia
webdunia
webdunia

ಚಿಕ್ಕಣ್ಣ ಕಾಮಿಡಿ ಹೂರಣ ತುಂಬಿರೋ ಬಿಲ್ಗೇಟ್ಸ್ ಫೆಬ್ರವರಿ 7ಕ್ಕೆ ರಿಲೀಸ್

ಚಿಕ್ಕಣ್ಣ ಕಾಮಿಡಿ ಹೂರಣ ತುಂಬಿರೋ ಬಿಲ್ಗೇಟ್ಸ್ ಫೆಬ್ರವರಿ 7ಕ್ಕೆ ರಿಲೀಸ್
ಬೆಂಗಳೂರು , ಸೋಮವಾರ, 3 ಫೆಬ್ರವರಿ 2020 (15:26 IST)
ಕಾಮಿಡಿ ಕಿಂಗ್ ಚಿಕ್ಕಣ್ಣ ಒಂದು ಸಿನಿಮಾದಲ್ಲಿದ್ದಾರೆಅಂದ್ರೆ ಅಲ್ಲಿ ನಗುವಿಗೇನು ಬರವಿಲ್ಲ. ಸ್ಕೀನ್ ಮೇಲೆ ಬಂದಾಗಲೆಲ್ಲ ತಮ್ಮ ಡಿಫರೆಂಟ್ ಮ್ಯಾನರಿಸಂಹಾಗೂ ಪಂಚ್ ಡೈಲಾಗ್ಗಳಿಂದ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರೆ. ಇನ್ನು ಇಡೀ ಸಿನಿಮಾ ಪೂರ್ತಿಅವ್ರೆ ನಾಯಕ ನಟನಾಗಿ ಇರ್ತಾರೆ ಅಂದ್ರೆ ಕೇಳೋದೇ ಬೇಡ ಅಲ್ಲಿ ನಗೆಯ ಸುಗ್ಗಿಯೇ ಹುಟ್ಟಿಕೊಳ್ಳುತ್ತೆ.

ಹೌದು. ಚಿಕ್ಕಣ್ಣ ಸ್ಯಾಂಡಲ್ ವುಡ್ನ ಒನ್ ಆಫ್ ದಿ ಮೋಸ್ಟ್ ಬ್ಯುಸಿಯೆಸ್ಟ್ ಕಾಮಿಡಿ ಆಕ್ಟರ್.ಸ್ಟಾರ್ ನಟರಷ್ಟೇ ಬ್ಯುಸಿಯಾಗಿರೋ ಚಿಕ್ಕಣ್ಣ ಬಿಲ್ ಗೇಟ್ಸ್ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
 
ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟೀಸರ್ಕಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿ ಸ್ಟಾರ್ ರವಿಚಂದ್ರನ್ ಮೆಚ್ಚಿಕೊಂಡಿದ್ದು ಯಮನ ಅವತಾರತಾಳೀರೋ ಚಿಕ್ಕಣ್ಣನನ್ನು ನೋಡೋದೆ ಒಂದು ಗಮ್ಮತ್ತು. ಚಿತ್ರದ ಸ್ಯಾಂಪಲ್ಗಳು ಟಾಕ್ ಕ್ರಿಯೇಟ್ ಮಾಡಿದ್ದುಕಿರುತೆರೆಯ ಶಿಶಿರ್ ಶಾಸ್ತ್ರಿ ಕೂಡ ಚಿಕ್ಕಣ್ಣ ಜೊತೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಬಿಲ್ಗೇಟ್ಸ್ ಕಾಮಿಡಿ ಎಂಟಟೈನ್ಮೆಂಟ್ ಚಿತ್ರವಾಗಿದ್ದು ಗಂಭೀರವಾದ ವಿಷಯವೊಂದನ್ನು ಕಾಮಿಕ್ ಆಗಿ ಪ್ರೇಕ್ಷಕರಮನಮುಟ್ಟಿಸುವ ಕೆಲಸವನ್ನು ನಿರ್ದೇಶಕ ಶ್ರೀನಿವಾಸ.ಸಿ ಮಾಡಿದ್ದಾರೆ. ಪಾಂಚಜನ್ಯ ಸಿನಿ ಕ್ರಿಯೇಷನ್ಸ್ನಡಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ನಿರ್ದೇಶಕ ಶ್ರೀನವಾಸ್ ಅವ್ರ ಸ್ನೇಹಿತರು ಬಂಡವಾಳ ಹೂಡಿದ್ದಾರೆ.ಫೆಬ್ರವರಿ 7ಕ್ಕೆ ಬಿಲ್ ಗೇಟ್ಸ್ ಚಿತ್ರ ಬಿಡುಗಡೆಯಾಗುತ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವಈ ಚಿತ್ರ ತೆರೆ ಮೇಲೆ ಯಾವ ರೀತಿ ಮ್ಯಾಜಿಕ್ ಕ್ರಿಯೇಟ್ ಮಾಡುತ್ತೆ ಕಾದು ನೋಡಸಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಲ್ ಗೇಟ್ಸ್ ನಿರ್ದೇಶಕನ ಬೆನ್ನಿಗೆ ನಿಂತ ಸ್ನೇಹಿತರು..!!