Select Your Language

Notifications

webdunia
webdunia
webdunia
webdunia

ರಾಜಕೀಯ ಅಖಾಡಕ್ಕೆ ಇಳಿಯೋದು ಪಕ್ಕಾ- ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ ಅಂದ ಕಿಚ್ಚ...!

ರಾಜಕೀಯ ಅಖಾಡಕ್ಕೆ ಇಳಿಯೋದು ಪಕ್ಕಾ- ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ ಅಂದ ಕಿಚ್ಚ...!

ಅತಿಥಾ

ಬೆಂಗಳೂರು , ಬುಧವಾರ, 10 ಜನವರಿ 2018 (19:28 IST)
ಕನ್ನಡ ಚಿತ್ರರಂಗದಲ್ಲಿ ಸಿನೇಮಾ ನಟ ನಟಿಯರು ರಾಜಕೀಯಕ್ಕೆ ಬರೋದು ಕಾಮನ್ ಆಗಿಬಿಟ್ಟಿದೆ. ಅದರಲ್ಲೂ ಟಾಪ್ ಸ್ಟಾರ್‌ಗಳು ರಾಜಕೀಯ ಪಕ್ಷ ಸೇರುತ್ತಾರೆ ಎಂದರೆ ಅಭಿಮಾನಿಗಳಿಗೆ ಏನೋ ಒಂದು ತರಹದ ಖುಷಿ. ಅದರಲ್ಲೂ ರಾಜಕೀಯ ಸೇರಬೇಕು ಎನ್ನೋ ಆಸೆ ಕೆಲ ನಟರಲ್ಲಿದ್ದರೂ ಈ ಹೀರೋ ಮಾತ್ರ ಅವರೆಲ್ಲರಿಗಿಂತ ಭಿನ್ನ ಯಾರಪ್ಪಾ ಇವರು ಅನ್ನೋ ಕೂತುಹಲನಾ ನಿಮಗಿದ್ಯಾ ಈ ವರದಿ ಓದಿ.
ಕನ್ನಡ ಚಿತ್ರರಂಗದ 6 ಅಡಿ ಬೂಲೇಟ್ ಅಂತೆಲ್ಲಾ ಕರೆಸಿಕೊಳ್ಳೋ ಕಿಚ್ಚ ಸುದೀಪ ರಾಜಕೀಯಕ್ಕೆ ಬರ್ತಾರೆ ಎನ್ನೋ ಸುದ್ದಿ ಎಲ್ಲಡೆ ಮನೆ ಮಾಡಿತ್ತು. ಆದರೆ ಅದಕ್ಕೆ ಕಿಚ್ಚ ಸುದೀಪ ಈ ಕುರಿತು ಸ್ಪಷ್ಟನೆ ನೀಡಿದ್ದು ನಾನು ರಾಜಕೀಯದ ಅಖಾಡಕ್ಕೆ ಇಳಿತಿನಿ, ಆದ್ರೆ ಚುನಾವಣಾ ಅಭ್ಯರ್ಥಿಯಾಗಲ್ಲ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಎದ್ದಿರುವ ಉಹಾಪೋಹಗಳಿಗೆ ತಿಲಾಂಜಲಿ ಹಾಡಿದ್ದಾರೆ.
 
ಈಗಾಗಲೇ ಹಲವಾರು ರಾಜಕೀಯ ನಾಯಕರು ಕಿಚ್ಚ ಸುದೀಪ್ ಅವರನ್ನು ತಮ್ಮ ಪಕ್ಷಕ್ಕೆ ಕರೆದುಕೊಳ್ಳಬೇಕು ಎಂದು ಚಿಂತನೆ ನೆಡೆಸಿ ಮಾತುಕತೆಯನ್ನು ಸಹ ನೆಡೆಸಿದ್ದರು, ಅಷ್ಟೇ ಅಲ್ಲ ಮೊನ್ನೆಯಷ್ಟೇ ಕುಮಾರ ಸ್ವಾಮಿ ಅವರು ಸಹ ತಮ್ಮ ಪಕ್ಷಕ್ಕೆ ಬರುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ ಅವನ್ನೆಲ್ಲವನ್ನು ನಯವಾಗಿಯೇ ತಿರಸ್ಕರಿಸಿರುವ ಕಿಚ್ಚ ಸುದೀಪ ಸಿನೇಮಾನೇ ನನ್ನ ಪ್ರಪಂಚ ನಾನು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
 
ಆದರೂ ಕೂಡಾ ಮೊನ್ನೆ ಕುಮಾರ ಸ್ಮಾಮಿ ತಮ್ಮ ಜನ್ಮದಿನದಂದು ಕಿಚ್ಚ ಅವರ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ತೆರಳಿದ್ದು, ತದನಂತರ ಅವರ ನಡುವೆ ರಾಜಕೀಯ ವಿಷಯದ ಕುರಿತು ಅವರಿಬ್ಬರ ನಡುವೆ 2 ಗಂಟೆಗಳ ಸುಧೀರ್ಘ ಚರ್ಚೆ ನೆಡೆದಿದೆ ಎನ್ನಲಾಗಿದೆ. ಒಂದು ವೇಳೆ ಈ ಚರ್ಚೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಕಿಚ್ಚ ಸುದೀಪ್ ಜೆಡಿಎಸ್ ಪರ ಪ್ರಚಾರ ಕೈಗೊಳ್ಳುವ ಕುರಿತು ಚಿಂತನೆ ನೆಡಿಸಿದ್ದಾರೆ ಎಂಬುದು ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಎ.ಆರ್.ರೆಹಮಾನ್ ಈಗ ಸಿಕ್ಕಿಂ ರಾಜ್ಯದ ರಾಯಭಾರಿ..!