Select Your Language

Notifications

webdunia
webdunia
webdunia
webdunia

ತೆಲುಗಿನಲ್ಲಿ ಬರಲಿದೆ ಗಣೇಶ್ ಅಭಿನಯದ 'ಚಮಕ್' ರಿಮೇಕ್

ತೆಲುಗಿನಲ್ಲಿ ಬರಲಿದೆ ಗಣೇಶ್ ಅಭಿನಯದ 'ಚಮಕ್' ರಿಮೇಕ್

ಅತಿಥಾ

ಬೆಂಗಳೂರು , ಸೋಮವಾರ, 8 ಜನವರಿ 2018 (17:38 IST)
ಗೋಲ್ಡನ್ ಸ್ಟಾರ್ ಗಣೇಶ್ ಹಾಗು ರಶ್ಮಿಕಾ ಮಂದಣ್ಣ ಅವರ ಅಭಿನಯದ 'ಚಮಕ್' ಸಿನಿಮಾ ನೋಡುಗರಿಗೆ ಕಿಕ್ ನೀಡುತ್ತಿದೆ.

ಒಳ್ಳೆಯ ರೀತಿಯಲ್ಲಿಯೇ ಚಮಕ್‌ ಕೊಟ್ಟು, ನವ ವರ್ಷವನ್ನು ಬರಮಾಡಿಕೊಂಡಿದೆ ಈ ಜೋಡಿ. ಎಂತಹ ಪಾತ್ರಕ್ಕೂ ಒಪ್ಪುವ ನಟ ಮತ್ತು ವಿಭಿನ್ನವಾಗಿ ಯೋಚಿಸುವ ನಿರ್ದೇಶಕರ ಕಾಂಬಿನೇಷನ್‌ ಈ ಚಿತ್ರಕ್ಕಿರುವುದರಿಂದ ಚಿತ್ರಪೂರ್ತಿ ತಮ್ಮದೇ ಸ್ಟೈಲ್‌ನಲ್ಲಿ ಚಮಕ್‌ ನೀಡಿದ್ದಾರೆ ನಿರ್ದೇಶಕರು. 
 
ಎಲ್ಲ ಕಡೆಯಿಂದ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಆಗಿತ್ತು. ಆದರೆ ಕನ್ನಡದ ನಂತರ ಈಗ ಈ ಸಿನಿಮಾ ಟಾಲಿವುಡ್‌ನಲ್ಲಿ ಕೂಡ ಬರುತ್ತಿರುವುದು ವಿಶೇಷ. 'ಚಮಕ್' ಸಿನಿಮಾ ಈಗ ತೆಲುಗಿಗೆ ರಿಮೇಕ್ ಆಗುತ್ತಿದೆ. 'ಚಮಕ್' ಚಿತ್ರವನ್ನು ಕನ್ನಡದಲ್ಲಿ ಮಾಡಿ ಹಣ ಗಳಿಸಿದ ನಿರ್ಮಾಪಕ ಚಂದ್ರಶೇಖರ್ ಅವರೇ ಈ ಸಿನಿಮಾವನ್ನು ತೆಲುಗಿನಲ್ಲಿ ಮಾಡುವ ತಯಾರಿ ನಡೆಸಿದ್ದಾರೆ. ಇನ್ನು ತೆಲುಗು ಅವತರಣಿಕೆಯ 'ಚಮಕ್' ಸಿನಿಮಾದಲ್ಲಿ ನಾಯಕನಾಗಿ ನಟ ನಾನಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿ ಗಣೇಶ್ ನಟಿಸಿದ್ದ ಪಾತ್ರಕ್ಕೆ ಅಲ್ಲಿ ನಾನಿ ಸೂಕ್ತ ಎನ್ನುವುದು ನಿರ್ಮಾಪಕರ ಅಭಿಪ್ರಾಯ.
 
ವಿಶೇಷವೆಂದರೆ ಟಾಲಿವುಡ್ ನಲ್ಲಿ ಬರುತ್ತಿರುವ 'ಚಮಕ್' ಸಿನಿಮಾಗೆ ಸಹ ರಶ್ಮಿಕಾ ಮಂದಣ್ಣ ನಾಯಕಿ ಆಗಲಿದ್ದಾರಂತೆ. ಚಿತ್ರದ ತಮ್ಮ ಖುಷಿ ಪಾತ್ರವನ್ನು ಅಲ್ಲಿಯೂ ಅವರೇ ನಿರ್ವಹಿಸಲಿದ್ದಾರಂತೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಶಾಕಿಂಗ್! ಬಾಡಿಗೆ ತಾಯಿಯಾಗಲಿದ್ದಾರೆ ಐಶ್ವರ್ಯಾ ರೈ ಬಚ್ಚನ್