Publish Date: Thu, 14 Dec 2017 (08:26 IST)
Updated Date: Thu, 14 Dec 2017 (08:29 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಜತೆಯಾಗಿ ಅಭಿನಯಿಸಿ ಟೀಸರ್ ಮೂಲಕವೇ ಕುತೂಹಲ ಹುಟ್ಟಿಸಿದ್ದ ಚಮಕ್ ಸಿನಿಮಾ ಬಿಡುಗಡೆ ಯಾವಾಗ ಎಂದು ಸ್ವತಃ ಗಣೇಶ್ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗಣೇಶ್, ಡಿಸೆಂಬರ್ 29 ಕ್ಕೆ ಚಮಕ್ ರಿಲೀಸ್. ನಿಮ್ಮ ಜೀವನಕ್ಕೆ ಇನ್ನಷ್ಟು ಚಮಕ್ ಕೊಡಿ’ ಎಂದಿದ್ದಾರೆ.
ಇತ್ತೀಚೆಗಷ್ಟೇ ಗಣೇಶ್ ಮತ್ತು ರಶ್ಮಿಕಾ ಸಿನಿಮಾಗಾಗಿ ಸ್ಕೂಬಾ ಡೈವಿಂಗ್ ಮಾಡಿ ಸುದ್ದಿ ಮಾಡಿದ್ದರು. ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾ ಟ್ರೇಲರ್ ಗಳು ಈಗಾಗಲೇ ಕುತೂಹಲ ಹುಟ್ಟಿಸಿವೆ. ವಿದೇಶಗಳಲ್ಲೂ ಹಾಡಿನ ಚಿತ್ರೀಕರಣ ನಡೆದಿದೆ. ಸಿನಿಮಾ ಹೇಗಿದೆ ಎಂದು ನೋಡಲು ಡಿಸೆಂಬರ್ 29 ರವರೆಗೆ ಕಾಯಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ