ರವಿಚಂದ್ರನ ಪುತ್ರನ ಸಿನೆಮಾ 'ಬೃಹಸ್ಪತಿ' ಇಂದು ತೆರೆಯಮೇಲೆ...!!

ನಾಗಶ್ರೀ ಭಟ್

ಶುಕ್ರವಾರ, 5 ಜನವರಿ 2018 (15:32 IST)
ನಂದ ಕಿಶೋರ್ ಅವರು ನಿರ್ದೇಶಿಸಿರುವ, ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರು ಮೊದಲ ಬಾರಿ ನಾಯಕ ನಟನಾಗಿ ಅಭಿನಯಿಸಿರುವ ಸಿನೆಮಾ 'ಬೃಹಸ್ಪತಿ' ಇಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.

ಇದು ಈ ವರ್ಷ 2018 ರಂದು ಬಿಡುಗಡುಗಡೆಯಾಗುತ್ತಿರುವ ಮೊದಲ ಕನ್ನಡ ಸಿನೆಮಾ ಆಗಿರಲಿದೆ. ಹೊಸ ವರ್ಷವನ್ನು ಶಬರಿಮಲೆ ಅಯ್ಯಪ್ಪನ ಸಾನಿಧ್ಯದಲ್ಲಿ ಪ್ರಾರಂಭಿಸಿರುವ ನಿರ್ದೇಶಕ ನಂದ ಕಿಶೋರ್ ಅವರು ಈ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದರು. "ಬೃಹಸ್ಪತಿ ಮತ್ತೊಂದು ಶುಕ್ರವಾರದ ಬಿಡುಗಡೆಯಾಗಿದ್ದರೂ ಸಹ ಈ ವರ್ಷದ ಮೊದಲ ಚಲನಚಿತ್ರವಾಗಿರುವುದರಿಂದ ಬಹಳ ನಿರೀಕ್ಷೆಯಿದೆ... ಇದು ಒತ್ತಡಕ್ಕೆ ಕಾರಣವಾಗಿದೆ" ಎಂದು ಹೇಳಿದ್ದಾರೆ.
 
ಇದನ್ನು ಮುಂದುವರಿಸುತ್ತಾ "ಈ ಚಿತ್ರಕ್ಕೆ ತಮಿಳಿನ ವಿಐಪಿ ಚಿತ್ರ ಸ್ಪೂರ್ತಿ ಮತ್ತು ಧನುಷ್ ಅವರ ನಟನೆಯ ಈ ಚಿತ್ರ ಕಮರ್ಷಿಯಲ್ ಹಿಟ್ ಆಗಿದೆ. ಇದು ಹೊಸದಾಗಿದೆ ಮತ್ತು ಇದು ಪ್ರೇಕ್ಷಕರನ್ನು ನಿರಾಸೆಗೊಳಿಸುವುದಿಲ್ಲ. ಇದು ಪೈಸಾ ವಸೂಲ್ ಮತ್ತು ಮನೋರಂಜನಾ ಚಿತ್ರವಾಗಿದೆ." ಎಂದು ಹೇಳಿದ್ದಾರೆ. ನಂದ ಕೀಶೋರ್ ಅವರಿಗೆ ರಾಕ್‌ಲೈನ್ ಪ್ರೊಡಕ್ಷನ್‌ನೊಂದಿಗೆ ಮತ್ತು ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರೊಂದಿಗೆ ಕೆಲಸ ಮಾಡಿರುವುದು ಬಹಳ ಸಂತೋಷವಾಗಿದೆಯಂತೆ. "ನನ್ನ ತಂದೆ (ಸುಧೀರ್) ರವಿಚಂದ್ರನ್ ಅವರ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರು, ಕ್ರೇಜಿಸ್ಟಾರ್ ಅವರಿಗೆ ಅನೇಕ ಅವಕಾಶಗಳನ್ನು ನೀಡಿದ್ದರು. ನನಗೆ ರವಿ ಸರ್ ಕುರಿತು ಅಪಾರವಾದ ಕೃತಜ್ಞತೆಯಿದೆ ಮತ್ತು ನಾನು ಅವರ ಮಗನ ಚಿತ್ರವನ್ನು ನಿರ್ದೇಶಿಸಲು ಸಂತೋಷಪಡುತ್ತೇನೆ." ಎಂದು ತಮ್ಮ ಮನಸ್ಸಿನಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
 
'ಬೃಹಸ್ಪತಿ'ಯಲ್ಲಿ ಬಾಲಿವುಡ್ ತಾರೆ ಮಿಷ್ಟಿ ಕನ್ನಡದಲ್ಲಿ ನಾಯಕ ನಟಿಯಾಗಿ ಮೊದಲ ಬಾರಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಕನ್ನಿಕಾ, ಸಾಯಿಕುಮಾರ್, ಸಿತಾರಾ ಪ್ರಮುಖ ಪಾತ್ರದಲ್ಲಿದ್ದರೆ ತಾರಕ್ ಪೊನ್ನಪ್ಪ, ಅವಿನಾಶ್, ಪ್ರಕಾಳ್ ಬೆಳವಾಡಿ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಟನಿಂದ ಮತ್ತೊಬ್ಬ ನಟಿಗೆ ಲೈಂಗಿಕ ಕಿರುಕುಳ; ಕೇಸ್ ದಾಖಲು