Publish Date: Fri, 08 Dec 2017 (12:49 IST)
Updated Date: Fri, 08 Dec 2017 (12:56 IST)
ದಾವಣಗೆರೆ: ಚನ್ನಗಿರಿ ತಾಲೂಕಿನ ತ್ಯಾವಣಿಗೆಯಲ್ಲಿ ಗಣೇಶ್ (42) ಎಂಬುವವರು ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಣೇಶ್ ಜಗದೀಶ್ ಎಂಬುವವರ ಜತೆ ಹುಲ್ಲುಕೊಯ್ಯಲು ಹೊಲಕ್ಕೆ ಹೋಗಿದ್ದಾಗ ಆನೆ ಏಕಾಏಕಿ ದಾಳಿ ಮಾಡಿದೆ. ಗಣೇಶ್ ಅವರ ಹೊಟ್ಟೆಗೆ ಆನೆ ತನ್ನ ದಂತದಿಂದ ತಿವಿದಿದೆ. ಗಾಯಗೊಂಡ ಗಣೇಶ್ ಅವರನ್ನು ಎಸ್.ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆ ದಾಳಿಯಿಂದ ಗ್ರಾಮಸ್ಥರು ಭೀತಿಗೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ