Select Your Language

Notifications

webdunia
webdunia
webdunia
webdunia

ಎ.ಆರ್.ರೆಹಮಾನ್ ಈಗ ಸಿಕ್ಕಿಂ ರಾಜ್ಯದ ರಾಯಭಾರಿ..!

ಎ.ಆರ್.ರೆಹಮಾನ್ ಈಗ ಸಿಕ್ಕಿಂ ರಾಜ್ಯದ ರಾಯಭಾರಿ..!

ನಾಗಶ್ರೀ ಭಟ್

ಬೆಂಗಳೂರು , ಬುಧವಾರ, 10 ಜನವರಿ 2018 (19:24 IST)
ಜನಪ್ರಿಯ ಸಂಗೀತ ನಿರ್ದೇಶಕ ಹಾಗೂ ಆಸ್ಕರ್ ಪ್ರಶಸ್ತಿಯನ್ನು ಪಡೆದ ಎ.ಆರ್.ರೆಹಮಾನ್ ಅವರು ಈಗ ಸಿಕ್ಕಿಂ ನ ಪ್ರವಾಸೋದ್ಯಮ ಮತ್ತು ವ್ಯಾಪಾರದ ಅಂಶಗಳಲ್ಲಿ ಪ್ರಚಾರದ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. 
ಜ. 8 ರಂದು ಸಿಕ್ಕಿಂ ರಾಜಧಾನಿ ಗ್ಯಾಂಗ್‍‌‌ಟೋಕ್‌ನಲ್ಲಿರುವ ಪಾಲ್ಜೋರ್ ಮೈದಾನದಲ್ಲಿ 11 ದಿನಗಳು ನಡೆದ ರೆಡ್ ಪಾಂಡಾ ವಿಂಟರ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಅಲ್ಲಿನ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ರೆಹಮಾನ್ ಅವರನ್ನು ಪ್ರಚಾರದ ರಾಯಭಾರಿಯಾಗಿ ಪ್ರಕಟಿಸಿ ಸನ್ಮಾನಿಸಿದರು. ಇದನ್ನು ಜನರು ಸಂತೋಷದಿಂದ ಭಾರೀ ಚಪ್ಪಾಳೆಗಳ ಮೂಲಕ ಸ್ವಾಗತಿಸಿದರು.
 
"ಸಿಕ್ಕಿಂ ಅದರ ವಿಶ್ವಾಸಾರ್ಹತೆ, ಸೌಂದರ್ಯ ಮತ್ತು ಮೂಲತತ್ವಕ್ಕೆ ಹೆಸರುವಾಸಿಯಾಗಿದೆ. ನಾನು ಹಲವು ಯೋಜನೆಗಳನ್ನು ಹೊಂದಿದ್ದೇನೆ ಮತ್ತು ಅವುಗಳನ್ನು ಚರ್ಚಿಸಲು ಇಲ್ಲಿಗೆ ಬರುತ್ತಿರುತ್ತೇನೆ. ಸಿಕ್ಕಿಂ ಅನ್ನು ಪ್ರವಾಸಿ ತಾಣವನ್ನಾಗಿಸಲು ನಾವು ಹಲವು ಸಂಗೀತದ ಸಹಯೋಗವನ್ನು ನೀಡಬಹುದು. ರಾಜ್ಯದ ಪ್ರಚಾರದ ರಾಯಭಾರಿಯಾಗಿ ಮಾಡಿರುವುದಕ್ಕೆ ಸಿಕ್ಕಿಂ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನನಗೆ ಈ ಕುರಿತು ವಿಶೇಷ ಕೃತಜ್ಞತೆ ಮತ್ತು ಗೌರವವಿದೆ. ಈ ಪ್ರಯಾಣವನ್ನು ನಾವು ಒಟ್ಟಿಗೆ ಪ್ರಯಾಣಿಸೋಣ." ಎಂದು ರೆಹಮಾನ್ ಹೇಳಿದರು.
 
ಸಿಕ್ಕಿಂ ಪ್ರವಾಸೋದ್ಯಮ ಸಚಿವ ಉಗೇನ್ ಭುಟಿಯಾ ಮಾತನಾಡುತ್ತಾ, "ಪರಿಚಯವೇ ಅಗತ್ಯವಿಲ್ಲದ ವ್ಯಕಿ ರೆಹಮಾನ್. ಇವರ ಬಗ್ಗೆ ಗೊತ್ತಿರುವವರೆಲ್ಲ ಸಿಕ್ಕಿಂ ಬಗ್ಗೆ ತಿಳಿದುಕೊಳ್ಳುತ್ತಾರೆ. ಅವರನ್ನು ಪ್ರಚಾರದ ರಾಯಭಾರಿಯಾಗಿ ಆಯ್ಕೆ ಮಾಡಿರುವುದರಿಂದ ಸಿಕ್ಕಿಂ ಪ್ರವಾಸೋದ್ಯಮ ಅಭಿವೃದ್ಧಿ ಹೊಂದಲಿದೆ" ಎಂದು ಹೇಳಿದ್ದಾರೆ.
 
ಭಾರತದ ಏಕೈಕ ಸಾವಯವ ರಾಜ್ಯವಾಗಿ ಸಿಕ್ಕಿಂ ಅನ್ನು ಗುರುತಿಸಲಾಗುತ್ತದೆ. ಚಳಿಗಾಲದ ಕಾರ್ನಿವಲ್ ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಉತ್ಸವದಲ್ಲಿ 11 ದಿನಗಳೂ ಸಂಗೀತ, ನೃತ್ಯ, ಸಾಹಸ ಕ್ರೀಡೆಗಳು ಮತ್ತು ಸಾವಯವ ಆಹಾರ ಉತ್ಪನ್ನಗಳ ಪ್ರದರ್ಶನ ನಡೆಯುತ್ತಿರುತ್ತದೆ. ಇದರೊಂದಿಗೆ ರೆಹಮಾನ್ ಮತ್ತು ಪ್ರಿಯಾಂಕಾ ಚೋಪ್ರಾ ತಮ್ಮ ಹೋಮ್ ಪ್ರೊಡಕ್ಷನ್‌ನ 'ಪಹುನಾ- ದಿ ಲಿಟಲ್ ವಿಸಿಟರ್ಸ್' ನ ಪ್ರಥಮ ಪ್ರದರ್ಶನಕ್ಕೆ ಏಪ್ರಿಲ್‌ನಲ್ಲಿ ಸಿಕ್ಕಿಂಗೆ ಭೇಟಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅನುಷ್ಕಾ ಶರ್ಮಾ 'ಪರಿ' ಟೀಸರ್ ನಿಮ್ಮ ನಿದ್ದೆ ಕೆಡಿಸಬಹುದು !!