Publish Date: Tue, 21 Nov 2023 (09:00 IST)
Updated Date: Tue, 21 Nov 2023 (09:14 IST)
ಚೆನ್ನೈ: ದಳಪತಿ ವಿಜಯ್ ನಾಯಕರಾಗಿರುವ ಸೂಪರ್ ಹಿಟ್ ಲಿಯೋ ಸಿನಿಮಾ ಈಗ ಒಟಿಟಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ.
ಲಿಯೋ ಸಿನಿಮಾ ಅಕ್ಟೋಬರ್ 19 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು. ಮೊದಲ ದಿನವೇ ಕೋಟಿ ಕೋಟಿ ಬಾಚಿಕೊಂಡಿತ್ತು. ಕೊನೆಗೆ 600 ಕೋಟಿ ರೂ. ಗಳಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಇದೀಗ ಒಟಿಟಿಯಲ್ಲಿ ನವಂಬರ್ 24 ರಿಂದ ಲಿಯೋ ಸಿನಿಮಾ ಪ್ರಸಾರವಾಗಲಿದೆ. ನೆಟ್ ಫ್ಲಿಕ್ಸ್ ಆಪ್ ನಲ್ಲಿ ಲಿಯೋ ವೀಕ್ಷಿಸಬಹುದು. ನೆಟ್ ಫ್ಲಿಕ್ಸ್ ಒಟಿಟಿ ಆಪ್ ದಾಖಲೆಯ ಮೊತ್ತಕ್ಕೆ ಲಿಯೋ ಸಿನಿಮಾ ಹಕ್ಕುಗಳನ್ನು ಖರೀದಿ ಮಾಡಿತ್ತು. ಇದೀಗ ಬಿಡುಗಡೆಯಾಗಿ ಒಂದು ತಿಂಗಳ ಬಳಿಕ ಒಟಿಟಿಯಲ್ಲಿ ತೆರೆ ಕಾಣುತ್ತಿದೆ.
ಕೇವಲ ತಮಿಳಿನಲ್ಲಿ ಮಾತ್ರವಲ್ಲದೆ ಬಹುಭಾಷೆಗಳಲ್ಲಿ ಸಿನಿಮಾ ಪ್ರಸಾರ ಕಾಣಲಿದೆ. ನವಂಬರ್ 24 ರಂದು ಕೇವಲ ಭಾರತದಲ್ಲಿ ಮಾತ್ರ ಪ್ರಸಾರ ಕಾಣಲಿದೆ. ನವಂಬರ್ 28 ರಿಂದ ವಿಶ್ವದಾದ್ಯಂತ ಒಟಿಟಿಯಲ್ಲಿ ಸಿನಿಮಾ ವೀಕ್ಷಿಸಬಹುದು.