ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ ಮತ್ತು ಶ್ರುತಿ ಹಾಸನ್ ಅವರು ಜೊತೆಯಾಗಿ ನಟಿಸಿದ ಚಿತ್ರ ವಕೀಲ್ ಸಾಬ್ ಚಿತ್ರ ಪ್ರೇಮಿಗಳ ಗಮನ ಸೆಳೆದಿತ್ತು.
ಬಾಲಿವುಡ್ ನ ಪಿಂಕ್ ಚಿತ್ರದ ರಿಮೇಕ್ ಆದ ಈ ಚಿತ್ರವನ್ನು ದಿಲ್ ರಾಜು ಮತ್ತು ಬೋನಿ ಕಪೂರ್ ಅವರು ನಿರ್ಮಿಸಿದ್ದಾರೆ. ಆದರೆ ಇದೀಗ ಚಿತ್ರದ ನಿರ್ಮಾಪಕರಿಗೆ ವ್ಯಕ್ತಿಯೊಬ್ಬರು ಲೀಗಲ್ ನೋಟಿಸ್ ಕಳುಹಿಸಿದ್ದಾರಂತೆ.
ಚಿತ್ರದ ದೃಶ್ಯವೊಂದರಲ್ಲಿ ಅನುಮತಿಯಿಲ್ಲದೆ ತನ್ನ ಫೋನ್ ಸಂಖ್ಯೆಯನ್ನು ಪ್ರದರ್ಶಿಸಲಾಗಿದೆ ಎಂದು ಆರೋಪಿಸಿ ವ್ಯಕ್ತಿ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವ್ಯಕ್ತಿ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದು, ಇದಕ್ಕೆ ಇನ್ನು ನಿರ್ಮಾಪಕರು ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ.