ನವದೆಹಲಿ: ಕಾಳಿ ದೇವಿ ಸಿಗರೇಟು ಸೇದುವ ಸಿನಿಮಾ ಪೋಸ್ಟರ್ ಪ್ರಕಟಿಸಿ ಭಾರೀ ಆಕ್ರೋಶಕ್ಕೊಳಗಾಗಿರುವ ಕೆನಡಾ ಪ್ರಜೆ ಲೀನಾ ಮಣಿಮೇಖಲೈ ಈಗ ಮತ್ತೆ ಹಿಂದೂಗಳನ್ನು ಕೆರಳಿಸುವ ಫೋಟೋ ಹಾಕಿದ್ದಾರೆ.
ಕಾಳಿ ಪೋಸ್ಟರ್ ವಿವಾದದ ಬಗ್ಗೆ ಭಾರತ ಸರ್ಕಾರವೇ ಆಕ್ಷೇಪ ವ್ಯಕ್ತಪಡಿಸಿತ್ತು. ಕೆನಡಾ ಸಂಸದರೂ ಈ ಬಗ್ಗೆ ಆಕ್ಷೇಪಿಸಿದ್ದರು. ಪೋಸ್ಟರ್ ಬಗ್ಗೆ ಭಾರತದ ವಿವಿದೆಡೆ ದೂರು ಕೂಡಾ ದಾಖಲಾಗಿದೆ.
ಇಷ್ಟೆಲ್ಲಾ ಆದರೂ ಲೀನಾ ಮಾತ್ರ ತನಗೆ ಇದು ಕೊಂಚವೂ ತಟ್ಟಿಲ್ಲ ಎನ್ನುವಂತೆ ಮತ್ತೆ ಹಿಂದೂ ದೇವರನ್ನು ಅವಹೇಳನ ಮಾಡುವಂತೆ ಫೋಟೋ ಪ್ರಕಟಿಸಿದ್ದಾರೆ. ಶಿವ ಮತ್ತು ದೇವಿಯ ವೇಷಧಾರಿಗಳಿಬ್ಬರು ಸಿಗರೇಟು ಸೇದುವ ಫೋಟೋ ಪ್ರಕಟಿಸಿರುವ ಲೀನಾ ಎಲ್ಸ್ ವೇರ್ ಎಂದು ಇಂಗ್ಲಿಷ್ ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಹಿಂದೂಗಳ ಆಕ್ರೋಶಕ್ಕೆ ಕ್ಯಾರೇ ಎಂದಿಲ್ಲ ಎಂದು ತೋರಿಸಿಕೊಂಡಿದ್ದಾರೆ.