ಹೈದರಾಬಾದ್: ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ಋತು ಪ್ರಭು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಸಿನಿಮಾಗೆ ಸಂಬಂಧಿಸಿದ ಅಥವಾ ತಮ್ಮ ವೈಯಕ್ತಿಕ ಫೋಟೋಗಳನ್ನು ಪ್ರಕಟಿಸುತ್ತಿರುತ್ತಾರೆ.
ಆದರೆ ಇದೀಗ ಸಮಂತಾರ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟವಾದ ಫೋಟೋ ಸಾಕಷ್ಟು ಚರ್ಚೆಗೆ ಕಾರಣವಾಯ್ತು. ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಪುತ್ರ ಕೆಟಿ ರಾಮ ರಾವ್ ಫೋಟೋ ಪ್ರಕಟಿಸಿದ್ದು ನೋಡಿ ಅಭಿಮಾನಿಗಳು ಅರೆಗಳಿಗೆ ತಬ್ಬಿಬ್ಬಾಗಿದ್ದರು.
ಆದರೆ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೇ ಫೋಟೋ ಡಿಲೀಟ್ ಮಾಡಲಾಗಿದ್ದು, ಸಮಂತಾ ಮ್ಯಾನೇಜರ್ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ. ಇದು ತಾಂತ್ರಿಕ ದೋಷದಿಂದಾಗಿ ಪ್ರಕಟವಾದ ಫೋಟೋ. ಉದ್ದೇಶಪೂರ್ವಕವಾಗಿ ಈ ಫೋಟೋ ಪ್ರಕಟಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಲಾಯಿತು.